alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯಂತೆ ಧೋನಿ ಹೆಲ್ಮೆಟ್ ಮೇಲೆ ಯಾಕಿಲ್ಲ ರಾಷ್ಟ್ರಧ್ವಜ?

ಭಾರತೀಯ ಕ್ರಿಕೆಟಿಗರ ದೇಶಪ್ರೇಮ, ರಾಷ್ಟ್ರಕ್ಕಾಗಿ ಇರುವ ಸಮರ್ಪಣಾ ಭಾವ ಎಲ್ಲರೂ ಮೆಚ್ಚುವಂಥದ್ದು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗಂತೂ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವವಿದೆ. ನಾಯಕ ವಿರಾಟ್ ಕೊಹ್ಲಿಯಂತೂ ತಮ್ಮ ಹೆಲ್ಮೆಟ್ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹೊಂದಿದ್ದಾರೆ.

ಆದ್ರೆ ಧೋನಿ ಹೆಲ್ಮೆಟ್ ಮೇಲೆ ರಾಷ್ಟ್ರಧ್ವಜದ ಚಿತ್ರವಿಲ್ಲ. ಸಚಿನ್ ತೆಂಡೂಲ್ಕರ್ ಕೂಡ ಹೆಲ್ಮೆಟ್ ಮೇಲಿರುವ ಬಿಸಿಸಿಐ ಲಾಂಛನದ ಕೆಳಭಾಗದಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವನ್ನು ಹಾಕಿಕೊಂಡಿದ್ರು. ಆದ್ರೆ ಧೋನಿ ಯಾಕೆ ಆ ರೀತಿ ಮಾಡ್ತಿಲ್ಲ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ.

ಧೋನಿ ವಿಕೆಟ್ ಕೀಪರ್ ಆಗಿರೋದ್ರಿಂದ ಹೆಲ್ಮೆಟ್ ಧರಿಸೋದು ಅನಿವಾರ್ಯ. ಆದ್ರೆ ಸ್ಪಿನ್ ಬೌಲಿಂಗ್ ಇದ್ದಾಗಲೆಲ್ಲ ಹೆಲ್ಮೆಟ್ ತೆಗೆದು ಅಲ್ಲೇ ನೆಲದ ಮೇಲೆ ಹಾಕಿ, ಟೋಪಿ ಧರಿಸ್ತಾರೆ. ಹೆಲ್ಮೆಟ್ ಮೇಲೆ ರಾಷ್ಟ್ರಧ್ವಜ ಅಳವಡಿಸಿದ್ರೆ, ಈ ರೀತಿ ನೆಲಕ್ಕೆ ಹಾಕಿದಾಗ ರಾಷ್ಟ್ರಧ್ವಜವನ್ನು ಅವಮಾನಿಸಿದಂತಾಗುತ್ತದೆ ಅನ್ನೋದು ಧೋನಿ ಭಾವನೆ.  ಹಾಗಾಗಿಯೇ ಧೋನಿ ಹೆಲ್ಮೆಟ್ ಮೇಲೆ ರಾಷ್ಟ್ರಧ್ವಜವನ್ನು ಹಾಕಿಕೊಂಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...