alex Certify
ಕನ್ನಡ ದುನಿಯಾ       Mobile App
       

Kannada Duniya

ವಿರುಷ್ಕಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ಕಿರಣ್ ರಿಜಿಜು

ಸಾಮಾಜಿಕ ಜಾಲತಾಣದಲ್ಲಿ ಜೂನ್ 16 ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಕಿದ್ದ ಪತ್ನಿ ಅನುಷ್ಕಾ ಶರ್ಮಾ ವಿಡಿಯೋ ಈಗ್ಲೂ ವಾದ ವಿವಾದಕ್ಕೆ ಕಾರಣವಾಗ್ತಿದೆ. ಕಾರ್ ನಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬಾಟಲಿಯನ್ನು ಹೊರಗೆ ಎಸೆದಿದ್ದ. ಪಕ್ಕದ ಕಾರ್ ನಲ್ಲಿದ್ದ ಅನುಷ್ಕಾ ಆತನಿಗೆ ಬುದ್ದಿ ಹೇಳಿದ್ದಳು.  ಪ್ಲಾಸ್ಟಿಕ್ ಬಾಟಲಿಯನ್ನು ಯಾರಾದ್ರೂ ಹೊರಗೆ ಎಸೆಯುತ್ತಾರಾ? ಇನ್ಮುಂದೆ ಪರಿಸರ ರಕ್ಷಣೆ ಬಗ್ಗೆ ಗಮನ ನೀಡಿ ಎಂದು ಸಲಹೆ ನೀಡಿದ್ದಳು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕೊಹ್ಲಿ, ಐಷಾರಾಮಿ ಕಾರಿನಲ್ಲಿ ಹೋಗ್ತಾರೆ. ಆದ್ರೆ ಬುದ್ದಿ ಮಾತ್ರ ಇಲ್ಲ. ಇವ್ರಿಂದ ದೇಶದ ಸ್ವಚ್ಛತೆ ಹೇಗೆ ಸಾಧ್ಯ ಎಂದು ಕಮೆಂಟ್ ಮಾಡಿದ್ದರು. ಇದೇ ವಿಚಾರ ಚರ್ಚೆಯಾಗ್ತಿದೆ. ಕೊಹ್ಲಿ-ಅನುಷ್ಕಾ ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆಂದು ಬಾಟಲಿಯನ್ನು ರಸ್ತೆಗೆ ಎಸೆದಿದ್ದ ಅರ್ಹಾನ್ ಸಿಂಗ್ ಹಾಗೂ ಆತನ ತಾಯಿ ಹೇಳಿದ್ದರು. ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ-ಅನುಷ್ಕಾ ಪ್ರಚಾರಕ್ಕಾಗಿ ಹೀಗೆ ಮಾಡ್ತಾರೆ ಎಂದಿದ್ದವರಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಕ್ಕ ಉತ್ತರ ನೀಡಿದ್ದಾರೆ. ಟ್ವಿಟ್ ಮಾಡಿರುವ ಕಿರಣ್, ಅನುಷ್ಕಾ-ಕೊಹ್ಲಿಗೆ ಪ್ರಚಾರದ ಅಗತ್ಯವಿಲ್ಲ. ಇಬ್ಬರೂ ಖಾಸಗಿತನ ಬಯಸ್ತಾರೆ. ನಮ್ಮ ವರ್ತನೆ ನಮ್ಮ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ ಎಂದು ಟ್ವಿಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...