alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಖೆಲ್ ಕ್ಲಾರ್ಕ್ ಗೆ ಮತ್ತೆ ಆಸೀಸ್ ನಾಯಕತ್ವ…?

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ನಡೆದ ಬಾಲ್ ಟೆಂಪರಿಂಗ್ ಆಸ್ಟ್ರೇಲಿಯಾ ಕ್ರಿಕೆಟ್ ಗೇ ಕಪ್ಪು ಚುಕ್ಕೆ. ಮಾಜಿ ಕ್ರಿಕೆಟಿಗರು ಕೂಡ ತಲೆತಗ್ಗಿಸುವಂತೆ ಮಾಡಿದೆ ಕೆಮರೊನ್ ಬ್ಯಾಂಕ್ರಫ್ಟ್ ಮಾಡಿರೋ ಈ ಕೃತ್ಯ.

ಘಟನೆ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಖೆಲ್ ಕ್ಲಾರ್ಕ್ ಆಘಾತ ವ್ಯಕ್ತಪಡಿಸಿದ್ದಾರೆ. ಕಳ್ಳಾಟದ ಬಳಿಕ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹಾಗಾಗಿ ಮತ್ತೆ ಮೈಖೆಲ್ ಕ್ಲಾರ್ಕ್ ತಂಡಕ್ಕೆ ಮರಳಬಹುದು, ನಾಯಕತ್ವ ವಹಿಸಿಕೊಳ್ಳಬಹುದು ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ. 2015ರಲ್ಲಿ ಕ್ಲಾರ್ಕ್ ನಿವೃತ್ತಿ ಪಡೆದಿದ್ದರು. ಸರಿಯಾದ ವ್ಯಕ್ತಿಗಳು ಈ ಬಗ್ಗೆ ತಮ್ಮನ್ನ ಪ್ರಶ್ನಿಸಿದ್ರೆ, ಸರಿಯಾದ ಉತ್ತರ ನೀಡುತ್ತೇನೆ ಅಂತಾ ಕ್ಲಾರ್ಕ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಆದ್ರೆ ಕೆಮರೊನ್ ಮಾಡಿದ ತಪ್ಪಿಗೆ ನಾಯಕ ಸ್ಟೀವ್ ಸ್ಮಿತ್ ತಲೆದಂಡವಾಗಿರೋದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ. ಆಸ್ಟ್ರೇಲಿಯಾ ತಂಡ ಮತ್ತೆ ಸಹಜ ಸ್ಥಿತಿಗೆ ಮರಳಲು ಸಹಕರಿಸುತ್ತೇನೆ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...