alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಪಕ ಚರ್ಚೆಗೊಳಗಾಗಿದೆ ಶಿವ ಸಿಂಗ್ ಅಸಾಂಪ್ರದಾಯಿಕ ಬೌಲಿಂಗ್ ಶೈಲಿ

ಉತ್ತರ ಪ್ರದೇಶದ ಯುವ ಎಡಗೈ ಸ್ಪಿನ್ನರ್ ಶಿವ ಸಿಂಗ್ ಪಶ್ಚಿಮ ಬಂಗಾಳ ವಿರುದ್ಧ ಗುರುವಾರ ನಡೆದ ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಅಸಾಂಪ್ರದಾಯಿಕ ಸ್ವಿಚ್ ಬೌಲಿಂಗ್ ಎಸೆದದ್ದನ್ನು ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಿದ್ದು ಗೊತ್ತೇ ಇದೆ. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೊಳಗಾಗಿದೆ.

ಶಿವಸಿಂಗ್ 360 ಡಿಗ್ರಿ ತಿರುಗಿ ಬೌಲಿಂಗ್ ಮಾಡಿದ್ದನ್ನು ಕೆಲವರು ಟೀಕಿಸಿದ್ದರೆ ಮತ್ತೆ ಕೆಲವರು ಯಾಕೆ ತಪ್ಪು ಎಂದು ಪ್ರಶ್ನಿಸಿದ್ದಾರೆ. ಭಾರತದ ಮಾಜಿ ನಾಯಕ, ಸ್ಪಿನ್ ಗಾರುಡಿಗ ಬಿಷನ್ ಸಿಂಗ್ ಬೇಡಿ ಅವರು ಈ ಬೌಲಿಂಗ್ ಬಗ್ಗೆ ವ್ಯಾಪಕ ಟೀಕೆ ಮಾಡಿದ್ದಾರೆ. ಕಲ್ಯಾಣಿಯ ಬೆಂಗಾಲ್ ಕ್ರಿಕೆಟ್ ಅಕಾಡಮಿ ಮೈದಾನದಲ್ಲಿ ಎಸೆದ ಈ ಎಸೆತವನ್ನು ಅವರು ಪಕ್ಕಾ `ವಿಲಕ್ಷಣ’ ಎಂದು ಜರೆದಿದ್ದಾರೆ. ಈ ಬಗ್ಗೆ ಅಂಪಾಯರ್ ನೀಡಿರುವ ಡೆಡ್ ಬಾಲ್ ತೀರ್ಪು ಕೂಡ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂಪಾಯರ್ ವಿನೋದ್ ಶೇಷನ್ ಈ ಎಸೆತವನ್ನು ಡೆಡ್ ಬಾಲ್ ಎಂದು ತೀರ್ಪು ನೀಡಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಆಟಗಾರರು ಇದನ್ನ ಮೈದಾನದಲ್ಲೇ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಕ್ರಿಕೆಟ್ ನ ಮೆರಿಲ್ ಬೋರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ)ನ ನಿಯಮ 41.4ರ ಪ್ರಕಾರ ಬೌಲರ್ ಒಬ್ಬ ಉದ್ದೇಶಪೂರ್ವಕವಾಗಿ ಬ್ಯಾಟ್ಸ್ ಮನ್ ಗಮನವನ್ನು ಹಾಳುಗೆಡವುವ ಬೌಲಿಂಗ್ ಶೈಲಿಯನ್ನು ಅಂಪಾಯರ್ ನಿರಾಕರಿಸಬಹುದು. ಅಂತಹ ಎಸೆತವನ್ನು ಓವರ್ ನ ಭಾಗ ಎಂದು ಪರಿಗಣಿಸಬೇಕೆಂದಿಲ್ಲ ಎಂದು ಅಂಪಾಯರ್ ವಿವರಿಸಿದ್ದಾರೆ. ಆದರೆ ಸಕಲವೂ ಬ್ಯಾಟ್ಸ್ ಮನ್ ಫೇವರ್ ಆಗಿರುವ ಗೇಮ್ ನಲ್ಲಿ ಹೀಗೊಂದು ಪ್ರಯೋಗ ಮಾಡಿದರೆ ತಪ್ಪೇನು ಎಂಬ ಜಿಜ್ಞಾಸೆಯನ್ನು ಹಲವರು ಮುಂದಿಟ್ಟಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...