alex Certify
ಕನ್ನಡ ದುನಿಯಾ       Mobile App
       

Kannada Duniya

ವಿಲಕ್ಷಣ ಫೋಟೋ ಹಾಕಿದ ವೇಗಿ ಮೇಲೆ ಅಭಿಮಾನಿಗಳ ಕೋಪ

umesh

ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಅವರ ಫೋಟೋ ಒಂದು ವೈರಲ್ ಆಗಿದೆ. ಕೈಯಲ್ಲಿ ದೊಡ್ಡ ದೊಡ್ಡ ಸಮುದ್ರಜೀವಿಗಳನ್ನು ಹಿಡಿದು ಉಮೇಶ್ ಯಾದವ್ ಪೋಸ್ ಕೊಟ್ಟಿದ್ದಾರೆ. ಎರಡು ದೊಡ್ಡ ಲಾಬ್ಸ್ಟರ್ ಗಳನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೆಲವರು ಲಾಬ್ಸ್ಟರ್ ಗಳ ಗಾತ್ರ ನೋಡಿ ಅಚ್ಚರಿ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಉಮೇಶ್ ಯಾದವ್ ಕೃತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಬ್ಸ್ಟರ್ ಗಳನ್ನು ಬಿಟ್ಟು ಕ್ರಿಕೆಟ್ ಕಡೆಗೆ ಗಮನಕೊಡು, ಚಾಂಪಿಯನ್ಸ್ ಟ್ರೋಫಿ ಸೋಲಿಗೆ ಇಂತಹ ವರ್ತನೆಗಳೇ ಕಾರಣ ಅಂತಾ ಕಿಡಿಕಾರಿದ್ದಾರೆ.

ಆದ್ರೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಉಮೇಶ್ ಯಾದವ್ ಆಡಿರಲಿಲ್ಲ. ಉಮೇಶ್ ಯಾದವ್ ಒಬ್ಬ ಬುದ್ಧಿಸ್ಟ್, ಜೊತೆಗೆ ಪಕ್ಕಾ ಸಸ್ಯಾಹಾರಿ ಎಂದುಕೊಂಡಿದ್ದ ಅಭಿಮಾನಿಯೊಬ್ಬ ಈ ಫೋಟೋ ನೋಡಿ ಶಾಕ್ ಆಗಿದ್ದಾನಂತೆ. ಇನ್ನು ಕೆಲವರು ಉಮೇಶ್ ಯಾದವ್ ಪ್ರಾಣಿಗಳನ್ನು ಹಿಂಸಿಸ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. 5 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 2-1 ಮುನ್ನಡೆ ಸಾಧಿಸಿದೆ. ನಾಳೆ ಸರಣಿಯ ಕೊನೆಯ ಪಂದ್ಯ ನಡೆಯಲಿದೆ.

😮

A post shared by Umesh Yadav (@umeshyaadav) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...