alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಪ್ರೀತಿಗೆ ಜೈಲು ಸೇರಿದ ಅಭಿಮಾನಿ

IndiaTvc3c7b6_kohli

ತಮ್ಮ ನೆಚ್ಚಿನ ನಾಯಕರಿಗಾಗಿ ಅಭಿಮಾನಿಗಳು ಏನೆಲ್ಲಾ ಮಾಡ್ತಾರೆ. ಅತಿಯಾದ ಅಭಿಮಾನ ಆಪತ್ತಿಗೂ ಕಾರಣವಾಗುತ್ತೆ. ಇದಕ್ಕೆ ಪಾಕಿಸ್ತಾನದ ವ್ಯಕ್ತಿಯೊಬ್ಬ ನಿದರ್ಶನ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲಿರುವ ಅಭಿಮಾನ ದುಬಾರಿಯಾಗಿ ಪರಿಣಮಿಸಿದೆ. ಜೈಲು ಸೇರುವಂತೆ ಮಾಡಿದೆ.

ಕೊಹ್ಲಿ ಅಭಿಮಾನಕ್ಕೆ ಜೈಲು ಸೇರಿದ ವ್ಯಕ್ತಿ ಹೆಸರು ಉಮ್ರ ದರಾಜ್. ಆತ ಮನೆ ಮುಂದೆ ತ್ರಿವರ್ಣ ಧ್ವಜ ಹಾರಿಸಿ ಕೊಹ್ಲಿ ಮೇಲಿನ ಪ್ರೀತಿ ತೋರಿಸಲು ಹೊರಟಿದ್ದಾನೆ. ಇದೇ ಯಡವಟ್ಟಾಗಿದೆ. ಸಾದರ್ ಠಾಣೆ ಪೊಲೀಸರು ಹಿಡಿದು ಒಳಗೆ ಹಾಕಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಭಾರತ ಕ್ರಿಕೆಟ್ ಆಟಗಾರ ಕೊಹ್ಲಿ ಎಂದ್ರೆ ಇಷ್ಟ. ಹಾಗಾಗಿ ಮನೆ ಮುಂದೆ ತ್ರಿವರ್ಣ ಧ್ವಜ ಹಾರಿಸಿದೆ ಎನ್ನುತ್ತಾನೆ ಉಮ್ರ ದರಾಜ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...