alex Certify
ಕನ್ನಡ ದುನಿಯಾ       Mobile App
       

Kannada Duniya

‘ನಿಮಗಾದರೆ ದ್ರಾವಿಡ್ ಇದ್ದಾರೆ, ನಮಗ್ಯಾರಿದ್ದಾರೆಂದ ಪಾಕ್ ಫ್ಯಾನ್ಸ್’

ಅಂಡರ್ 19 ವಿಶ್ವ ಕಪ್ ಸೆಮಿ ಫೈನಲ್ ನಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

ರಾಹುಲ್ ದ್ರಾವಿಡ್ ಮಾರ್ಗದರ್ಶನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅಂಡರ್ 19 ತಂಡ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಇಲ್ಲಿಯೂ ಗೆಲುವು ಸಾಧಿಸುವ ಮೂಲಕ ವಿಶ್ವ ಕಪ್ ಪಡೆಯುವ ವಿಶ್ವಾಸದಲ್ಲಿದೆ.

ಈ ಮಧ್ಯೆ ಭಾರತದ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ಪರಾಭವಗೊಂಡಿರುವುದಕ್ಕೆ ಪಾಕ್ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಭಾರತದ ಗೆಲುವಿನ ಹಿಂದೆ ರಾಹುಲ್ ದ್ರಾವಿಡ್ ರ ಪ್ರಮುಖ ಪಾತ್ರವಿದೆ. ಅವರ ಮಾರ್ಗದರ್ಶನದಲ್ಲಿ ಭಾರತೀಯ ತಂಡ ಯಶಸ್ಸು ಸಾಧಿಸಿದ್ದು, ಆದರೆ ಪಾಕ್ ತಂಡಕ್ಕೆ ಸಮರ್ಥ ಮಾರ್ಗದರ್ಶಕರ ಕೊರತೆಯಿದೆ ಎಂದಿದ್ದಾರೆ. ಅಲ್ಲದೇ ಹಿರಿಯ ಆಟಗಾರರು ತಮ್ಮ ಅನುಭವವನ್ನು ಯುವ ಆಟಗಾರರಿಗೆ ತಿಳಿಸಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...