alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್ 19 ವಿಶ್ವಕಪ್ ಫೈನಲ್: ಭಾರತಕ್ಕೆ 217 ರನ್ ಟಾರ್ಗೆಟ್

ಮೌಂಟ್ ಮೌಂಗನ್ಯೂಯಿ: ಮೌಂಟ್ ಮೌಂಗನ್ಯೂಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 47.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 216 ರನ್ ಗಳಿಸಿದೆ. ಆಸೀಸ್ ಪರವಾಗಿ ಜಾಕ್ ಎಡ್ವರ್ಡ್ಸ್ 28, ಮ್ಯಾಕ್ಸ್ ಬ್ರಯಾಂಟ್ 14, ಜೇಸನ್ ಸಾಂಘಾ 13, ಜೋನಾಥನ್ ಮೆರ್ಲೊ 74, ಪರಮ್ ಉಪ್ಪಲ್ 34, ನೇಥನ್ ಮ್ಯಾಕ್ಸ್ ವೇನಿ 23, ವಿಲ್ ಸುದರ್ಲ್ಯಾಂಡ್ 5, ಬ್ಯಾಕ್ಸ್ ಟೀರ್ ಹೋಲ್ಟ್ 13, ಝಾಕ್ ಎವನ್ಸ್ 1, ರ್ಯಾನ್ ಹೇಡ್ಲಿ 1, ಲ್ಲಾಡ್ ಪೋಪ್ ಅಜೇಯ 0 ರನ್ ಗಳಿಸಿದ್ದಾರೆ.

ಭಾರತದ ಪರವಾಗಿ ಇಶಾನ್ ಪೊರೆಲ್ 2, ಶಿವಸಿಂಗ್ 2, ಕಮಲೇಶ್ ನಾಗರ್ ಕೋಟಿ 2, ಅನುಕೂಲ್ ರಾಯ್ 2, ಶಿವಮ್ ಮಾವಿ 1 ವಿಕೆಟ್ ಪಡೆದಿದ್ದಾರೆ. ಭಾರತದ ಗೆಲುವಿಗೆ 217 ರನ್  ಗುರಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...