alex Certify
ಕನ್ನಡ ದುನಿಯಾ       Mobile App
       

Kannada Duniya

ದ್ರಾವಿಡ್ ಗರಡಿಯಲ್ಲಿ ಮಿಂಚಿದ ಯಂಗ್ ಇಂಡಿಯಾ….

ದಾಖಲೆಯ 4 ನೇ ಬಾರಿ ಅಂಡರ್ 19 ವಿಶ್ವಕಪ್ ಅನ್ನು ಭಾರತ ತಂಡ ಜಯಿಸಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪೃಥ್ವಿ ಶಾ ಬಳಗ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಜಯಿಸುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.

ಮೊದಲ ಮತ್ತು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ದ್ರಾವಿಡ್ ಹುಡುಗರು ಮಣಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡವನ್ನು ಅಭಿನಂದಿಸಿದ ರಾಹುಲ್ ದ್ರಾವಿಡ್, ಯುವ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ಹೇಳಿದ್ದಾರೆ.

ಈ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸೀಸ್ ವಿರುದ್ಧ 100 ರನ್ ಅಂತರದಿಂದ ಜಯಗಳಿಸಿದ್ದ ಭಾರತ, ನಂತರದಲ್ಲಿ ಕ್ರಿಕೆಟ್ ಶಿಶುಗಳಾದ ಪಪುವಾ ನ್ಯೂಗಿನಿ ವಿರುದ್ಧ 10 ವಿಕೆಟ್ ಅಂತರದಿಂದ ಜಯಗಳಿಸಿತ್ತು. ಜಿಂಬಾಬ್ವೆ ವಿರುದ್ಧ 10 ವಿಕೆಟ್, ಬಾಂಗ್ಲಾ ವಿರುದ್ಧ 131 ರನ್ ಅಂತರದಿಂದ ಜಯಗಳಿಸಿತ್ತು.

ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 203 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿತ್ತು. ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ ಅಂತರದಿಂದ ಮಣಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿದೆ.

ಪೃಥ್ವಿ ಶಾ, ಶುಭಮನ್ ಗಿಲ್, ಮನ್ ಜೋತ್ ಕಾಲ್ರಾ ಮೊದಲಾದವರು ಟೀಂ ಇಂಡಿಯಾ ಬಾಗಿಲು ಬಡಿಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...