alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಬಾಲಕನ ಕವರ್ ಡ್ರೈವ್ ಗೆ ಐಸಿಸಿ ಫುಲ್ ಫಿದಾ…!

ಬಾಂಗ್ಲಾದೇಶದ ಎರಡು ವರ್ಷದ ಪೋರ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಸಕತ್ ವೈರಲ್ ಆಗಿದೆ. ಎಳೆಯ ಮಗುವಿನ ಕ್ರಿಕೆಟ್ ಪ್ರತಿಭೆ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.

ಹೀಗೆ ಕೈಯಲ್ಲಿ ಬ್ಯಾಟ್ ಹಿಡಿದು ಎಸೆತಗಳನ್ನು ಎದುರು ನೋಡುತ್ತಿರುವ ಪುಟ್ಟ ಬಾಲಕನ ಹೆಸರು ಅಲಿ. ತಂದೆ ಎಸೆತಗಳಿಗೆ ಕವರ್ ಡ್ರೈವ್ ಬಾರಿಸುವ ಶೈಲಿ ಯಾವ ನುರಿತ ಕ್ರಿಕೆಟ್ ಬ್ಯಾಟ್ಸ್ ಮನ್ ಗೂ ಕಮ್ಮಿ ಇಲ್ಲ. ಈ ಪೋರನ ಆಟವನ್ನು ಅಭಿಮಾನಿಗಳು ಕಣ್ಣು ತುಂಬಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ತಾಣದಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡ್ತಾ ಇದೆ. ಈ ಪುಟ್ಟ ಬಾಲಕನ ಕ್ರಿಕೆಟ್ ಆಟಕ್ಕೆ ಐಸಿಸಿ ಸಹ ಮನಸೋತಿದೆ. ಅಲ್ಲದೆ ಐಸಿಸಿ ಈ ವಾರದ ಫ್ಯಾನ್ ಆಫ್ ಕ್ರಿಕೆಟ್ ಪ್ರಶಸ್ತಿ ನೀಡಲು ಮುಂದಾಗಿದೆ.

ಪುಟ್ಟ ಬಾಲಕರು ಕ್ರಿಕೆಟ್ ಆಡಿ ಎಲ್ಲರ ಚಿತ್ತ ಕದ್ದಿರೋದು ಇದೇ ಮೊದಲೇನಲ್ಲ. ಈ ಮೊದಲು ಪಾಕಿಸ್ತಾನ ತಂಡದ ಮಾಜಿ ಆಟಗಾರ ವಾಸೀಮ್ ಅಕ್ರಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಬಾಲಕ ಬೌಲಿಂಗ್ ಮಾಡುವ ವಿಡಿಯೋ ಅದಾಗಿತ್ತು. ಅದಕ್ಕೆ ಅಕ್ರಮ್, ಸುಲ್ತಾನ್ ಆಫ್ ಸಿಂಗ್ ಎಂದು ಅಡಿ ಬರಹ ಬರೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...