alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನಿಂದ ಹಲ್ಲೆಗೊಳಗಾದ ವಿಂಬಲ್ಡನ್ ಚಾಂಪಿಯನ್

petra

ವಿಶ್ವದ 11 ನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ 2 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಪೆಟ್ರಾ ಕ್ವಿಟೋವಾ ಅವರ ಮೇಲೆ ಕಳ್ಳನೊಬ್ಬ ಹಲ್ಲೆ ನಡೆಸಿದ್ದಾನೆ.

ಜೆಕ್ ಗಣರಾಜ್ಯದ ಪ್ರೊಸ್ಟೆಜೊವ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಪೆಟ್ರಾ ಕ್ವಿಟೋವಾ ಇದ್ದಾಗ, ಕಳ್ಳ ದಾಳಿ ಮಾಡಿದ್ದು, ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕ್ವಿಟೋವಾ ಅವರ ಎಡಗೈಗೆ ಪೆಟ್ಟಾಗಿರುವುದರಿಂದ 2017 ರ ಮೊದಲ ಟೂರ್ನಿ ಹಾಪ್ ಮನ್ ಕಪ್ ನಿಂದ ಅವರು ದೂರ ಉಳಿಯುವಂತಾಗಿದೆ.

ಕ್ವಿಟೋವಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ವಕ್ತಾರ ಮಾಹಿತಿ ನೀಡಿದ್ದಾರೆ. ವಿಂಬಲ್ಡನ್ ಮಹಿಳಾ ಸಿಂಗಲ್ಸ್ ನಲ್ಲಿ ಪೆಟ್ರಾ ಕ್ವಿಟೋವಾ 2 ಬಾರಿ ಚಾಂಪಿಯನ್ ಆಗಿದ್ದಾರೆ.

2011 ಮತ್ತು 2014 ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಅವರು, ಪಾದದ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲೇ ಕಳ್ಳನಿಂದ ಹಲ್ಲೆಗೆ ಒಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...