alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರ್ದಿಕ್ ಪಾಂಡ್ಯಾಗೂ ಟ್ರೋಲ್ ಕಾಟ, ಯಾಕೆ ಗೊತ್ತಾ…?

ಮೈದಾನದ ಒಳಗೂ ಹೊರಗೂ ಸದಾ ಸುದ್ದಿ ಮಾಡೋ ಟೀಂ ಇಂಡಿಯಾದ ಆಟಗಾರ ಅಂದ್ರೆ ಹಾರ್ದಿಕ್ ಪಾಂಡ್ಯ. ಚಿತ್ರ ವಿಚಿತ್ರ ಕೇಶ ವಿನ್ಯಾಸ, ಟ್ಯಾಟೂ ಮೂಲಕ ಜಾಲತಾಣಗಳಲ್ಲಿ ಚರ್ಚೆಗೋ ಗ್ರಾಸವಾಗ್ತಿದ್ದಾರೆ. ಸದ್ಯ ಪಾಂಡ್ಯ ಕೂಡ ದೇಶದ ಸ್ಟೈಲ್ ಐಕಾನ್ ಗಳಲ್ಲೊಬ್ರು.

ಆದ್ರೆ ಪಾಂಡ್ಯಾರ ನ್ಯೂ ಲುಕ್ ಮಾತ್ರ ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ತಮ್ಮ ಹೊಸ ಅವತಾರವನ್ನು ಟ್ವಿಟ್ಟರ್ ನಲ್ಲಿ ಅನಾವರಣ ಮಾಡಿರೋ ಹಾರ್ದಿಕ್ ಗೆ ಟ್ರೋಲ್ ಗಳ ಸುರಿಮಳೆಯಾಗಿದೆ. ಪಾಂಡ್ಯ ಹೊಸ ಲುಕ್ ಜೋಕರ್ ನಂತಿದೆ ಅನ್ನೋದು ಹಲವರ ಅಭಿಪ್ರಾಯ.

ಇನ್ನು ಕೆಲವರು ಲೇಡಿ ಗಾಗಾಳ ಪುರುಷಾವತಾರ ಅಂತಾನೂ ಟ್ವೀಟ್ ಮಾಡಿದ್ದಾರೆ. ಬರೀ ಸ್ಟೈಲ್ ಮಾಡೋದು ಮಾತ್ರವಲ್ಲ, ಬ್ಯಾಟಿಂಗ್ ಕಡೆಗೂ ಗಮನ ಇರಲಿ ಅನ್ನೋದು ಇನ್ನೊಂದಷ್ಟು ಜನರ ಸಲಹೆ. ಈ ರೀತಿ ಅಲಂಕಾರ ಮಾಡಿಕೊಳ್ಳೋದ್ರಿಂದ ಪ್ರಯೋಜನವಿಲ್ಲ ಅಂತಾ ಕಾಲೆಳೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಿಂದ ಪಾಂಡ್ಯರನ್ನು ಹೊರಗಿಟ್ಟಿದ್ದು, ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಟೀಂ ಇಂಡಿಯಾದ ಆಲ್ ರೌಂಡರ್ ಬಿಂದಾಸ್ ಆಗಿದ್ದಾರೆ. ಮೇಕ್ ಓವರ್, ಹೇರ್ ಸ್ಟೈಲ್ ಅಂತಾ ಕಾಲಕಳೆಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...