alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಧೂಳೆಬ್ಬಿಸುತ್ತಿದೆ ಅಮ್ಮ ಮತ್ತು ಮಗ ಆಡಿರುವ ಗಲ್ಲಿ ‘ಕ್ರಿಕೆಟ್’

ದೇಶದ ಯಾವೊಬ್ಬ ಮಗುವೂ ಗಲ್ಲಿ ಕ್ರಿಕೆಟ್ ಆಡದೇ, ತನ್ನ ಬಾಲ್ಯದ ದಿನಗಳನ್ನು ಕಳೆಯುವುದಿಲ್ಲ ಎಂಬ ವಾತಾವರಣವಿದೆ.

ಕೆಲವರಿಗಂತೂ ಇದು ಧರ್ಮ ಎಂಬಂತೆ ಆಗಿಬಿಟ್ಟಿದೆ. ಪ್ಲಾಸ್ಟಿಕ್ ಬ್ಯಾಟ್ ಹಿಡಿದು ತೀರಾ ಎಳೆಯ ವಯಸ್ಸಿನಲ್ಲಿ ಆಟ ಆಡುವ ಮಕ್ಕಳಿಗೆ ಅವರ ಹೆತ್ತವರು ನೀಡುವ ಬೆಂಬಲವನ್ನು ಕಂಡೇ ಇದ್ದೇವೆ.

ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌ ವಿಡಿಯೋ ಒಂದನ್ನು ಶೇರ್‌ ಮಾಡಿಕೊಂಡಿದ್ದು, ಬ್ಯಾಟು ಹಿಡಿದ ತನ್ನ ಪುಟಾಣಿ ಮಗನೊಬ್ಬನಿಗೆ ತಾಯೊಬ್ಬಳು ಚೆಂಡು ಎಸೆಯುತ್ತಿದ್ದಾರೆ. ಈ ಮುದ್ದಾದ ವಿಡಿಯೋವನ್ನು ಕಂಡು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ.

ಇದನ್ನು ಕಂಡ ಪ್ರತಿಯೊಬ್ಬರೂ ಸಹ ಖುದ್ದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...