alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಪೈರ್ ಗಳನ್ನೇ ಗೊಂದಲಕ್ಕೀಡು ಮಾಡಿತ್ತು ಅಫ್ರಿದಿಯ ಅದ್ಬುತ ಕ್ಯಾಚ್

ದುಬೈನಲ್ಲಿ ನಡೆಯತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಬೌಂಡರಿ ಲೈನ್ ಬಳಿ ಶಾಹಿದ್ ಅಫ್ರಿದಿ ಹಿಡಿದ ಕ್ಯಾಚ್ ಕುರಿತು ಅಂಪೈರ್ ಗಳೇ ಗಲಿಬಿಲಿಗೊಳಗಾಗಿದ್ದು, ಅಂತಿಮವಾಗಿ ಔಟ್ ಎಂದು ತೀರ್ಮಾನ ಕೊಟ್ಟಿದ್ದಾರೆ.

ಶುಕ್ರವಾರದಂದು ಕರಾಚಿ ಕಿಂಗ್ಸ್ ಹಾಗೂ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು . ಕರಾಚಿ ಕಿಂಗ್ಸ್ ತಂಡದ ಪರ ಆಟಗಾರ, ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹಿದ್ ಅಫ್ರಿದಿ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಆಟಗಾರ ಉಮರ್ ಅಮಿನ್, ಮೊಹಮ್ಮದ್ ಇರ್ಫಾನ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತ ಬಾರಿಸಿದ್ದರು.

ಚೆಂಡು ಇನ್ನೇನು ಬೌಂಡರಿ ಗೆರೆ ದಾಟುತ್ತಿದೆ ಎನ್ನುವಾಗ ಮೇಲಕ್ಕೆ ಹಾರಿ ಕ್ಯಾಚ್ ಹಿಡಿದ ಶಾಹಿದ್ ಅಫ್ರಿದಿ ಬಳಿಕ ಬೌಂಡರಿ ಗೆರೆ ದಾಟಿದ್ದರು. ಆದರೆ ಅದಕ್ಕೂ ಮುನ್ನ ಕೈಲಿದ್ದ ಚೆಂಡನ್ನು ಮತ್ತೆ ಮೇಲೆಸೆದಿದ್ದು, ಪುನಃ ಕ್ಯಾಚ್ ಹಿಡಿದಿದ್ದಾರೆ. ಇದಕ್ಕೆ ಔಟ್ ನೀಡಬೇಕೋ ಬೇಡವೋ ಎಂದು ಗೊಂದಲ ಅಂಪರೈಗಳನ್ನು ಕಾಡಿತ್ತು.

ಕೊನೆಗೆ 3 ನೇ ಅಂಪೈರ್ ಮೊರೆ ಹೋಗಿದ್ದು, ಔಟ್ ಎಂದು ಘೋಷಿಸಲಾಗಿದೆ. ವಾಸ್ತವವಾಗಿ ಬೌಂಡರಿ ಲೈನ್ ಒಳಗೆಯೇ ಶಾಹಿದ್ ಆಫ್ರಿದಿ ಕ್ಯಾಚ್ ಹಿಡಿದಿದ್ದು, ಬೌಂಡರಿ ಗೆರೆ ದಾಟುವ ಮುನ್ನವೇ ಚೆಂಡನ್ನು ಪುನಃ ಮೇಲಕ್ಕೆಸೆದಿದ್ದರು. ಶಾಹಿದ್ ಆಫ್ರಿದಿ ಗೆರೆ ದಾಟಿದ್ದರಾದರೂ ಪುನಃ ಒಳ ಬಂದು ಮೇಲೆಸೆದಿದ್ದ ಚೆಂಡನ್ನು ಕ್ಯಾಚ್ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...