alex Certify
ಕನ್ನಡ ದುನಿಯಾ       Mobile App
       

Kannada Duniya

ಶರ್ಟ್ ಬಿಚ್ಚಿದ ಹಿಂದಿನ ಕಹಾನಿ ನೆನೆದ ದಾದಾ…!

ನಾಟ್ ವೆಸ್ಟ್ ಸರಣಿ ಎಂದ್ರೆ ಸಾಕು….ನಮ್ಮ ಕಣ್ಣುಗಳ ಮುಂದೆ ಲಾರ್ಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಟೀ-ಶರ್ಟ್ ತೆಗೆದಿದ್ದು ನೆನಪಾಗುತ್ತದೆ. ಈ ಘಟನೆ ನಡೆದು ವರ್ಷಗಳೇ ಕಳೆದಿವೆ. ಆದ್ರೆ, ಇನ್ನು ಈ ದೃಶ್ಯಗಳು ಅಭಿಮಾನಿಗಳ ಮನದಲ್ಲಿ ಹಸಿರಾಗಿವೆ.

ಸೌರವ್ ಗಂಗೂಲಿ ತಮ್ಮ ನೆನಪಿನ ಬುತ್ತಿಯನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ಅಂದಹಾಗೆ ಆ ದಿನ, ನನ್ನ ಪಕ್ಕದಲ್ಲೇ ವಿವಿಎಸ್ ಲಕ್ಷ್ಮಣ ಹಾಗೂ ಹರ್ಭಜನ್ ಸಿಂಗ್ ನಿಂತಿದ್ದರು. ಅಲ್ಲದೇ ಶರ್ಟ್ ಕಳಚದಂತೆ ಲಕ್ಷ್ಮಣ್, ತಿಳಿಸಿದ್ರು. ಯಾವುದನ್ನೂ ಲೆಕ್ಕಿಸದ ದಾದಾ, ಫ್ಲಿಂಟಾಫ್ ಗೆ ಟಾಂಗ್ ನೀಡಿದ್ರು.

ಗಂಗೂಲಿ ಶರ್ಟ್ ಬಿಚ್ಚುತ್ತಿದ್ದಂತೆ ಪಕ್ಕದಲೇ ಇದ್ದ, ಭಜ್ಜಿ ನಾನು ಏನು ಮಾಡಲಿ ಎಂದು ಕೇಳಿದ್ರು. ಗಂಗೂಲಿ ತಡ ಮಾಡದೆ, ನೀನು ಶರ್ಟ್ ಬಿಚ್ಚು ಎಂದು ತಿಳಿಸಿದ್ದರಂತೆ. ಆಗ ನಾನು ಯುವಕ. ಬಿಸಿ ರಕ್ತ ಹಾಗೆ ಮಾಡಿಸಿತು. ಆದ್ರೆ, ಈಗ ಮನೆಯಲ್ಲಿ ನನ್ನ ಮಗಳು ಹೀಗೇಕೆ ಮಾಡಿದ್ದೇ ಎಂದು ಕೇಳಿದಾಗ ಮುಜುಗರವಾಗುತ್ತದೆ ಎಂದಿದ್ದಾರೆ ಗಂಗೂಲಿ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 325 ರನ್ ಕಲೆ ಹಾಕಿತ್ತು. ಬೃತಹ್ ಮೊತ್ತ ಚೇಸ್ ಮಾಡಿದ ಭಾರತ ಇನ್ನೂ ಮೂರು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ 69, ಮೊಹಮ್ಮದ್ ಕೈಫ್ 87, ನಾಯಕ ಸೌರವ್ ಗಂಗೂಲಿ 60 ರನ್ ಸಿಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...