alex Certify
ಕನ್ನಡ ದುನಿಯಾ       Mobile App
       

Kannada Duniya

ಅಥ್ಲೀಟ್ ನನ್ನು ಅಡ್ಡಗಟ್ಟಿದ ದರೋಡೆಕೋರರಿಗೆ ಸಿಕ್ಕಿದ್ದು ಹಳೆ ಬೂಟು

marathon

ದಕ್ಷಿಣ ಆಫ್ರಿಕಾದ ಖ್ಯಾತ ಅಥ್ಲೀಟ್ ಒಬ್ಬರನ್ನು ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. 9 ಬಾರಿ ಮ್ಯಾರಥಾನ್ ಗೆದ್ದಿರುವ ಬ್ರೂಸ್ ಫಾರ್ಡೈಸ್ ಬೆಳಗ್ಗೆ ರನ್ನಿಂಗ್ ಪ್ರ್ಯಾಕ್ಟೀಸ್ ಗೆ ಅಂತಾ ತೆರಳಿದ್ರು. ಜೋಹಾನ್ಸ್ ಬರ್ಗ್ ನ ಪಾರ್ಟ್ ಟೌನ್ ಬಳಿ ಕಾರ್ ನಲ್ಲಿ ಬಂದಿದ್ದ ಇಬ್ಬರು ಬ್ರೂಸ್ ನನ್ನು ಅಡ್ಡಗಟ್ಟಿದ್ದಾರೆ.

ನಂತರ ಗನ್ ತೋರಿಸಿ ಬೆದರಿಸಿ ಅವರ ಬಳಿಯಿದ್ದ ವಾಚ್, ಬೂಟು ಸೇರಿದಂತೆ ಎಲ್ಲಾ ವಸ್ತುಗಳನ್ನೂ ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ದಿಢೀರ್ ದಾಳಿಯಿಂದ ಒಮ್ಮೆ ಕಂಗಾಲಾದ್ರೂ, ಬ್ರೂಸ್ ಅಭ್ಯಾಸ ಬಿಡಲಿಲ್ಲ. ಮನೆಗೆ ತೆರಳಿ ಹೊಸ ಶೂ ಹಾಕಿಕೊಂಡು ಮತ್ತೆ ಓಡಲು ಶುರು ಮಾಡಿದ್ರು.

ಈ ಘಟನೆಯನ್ನು ಬ್ರೂಸ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದುಷ್ಕರ್ಮಿಗಳು ಹಳೆ ಬೂಟನ್ನು ತೆಗೆದುಕೊಂಡು ಹೋಗಿದ್ದು ಒಳ್ಳೆಯದೇ ಆಯ್ತು, ಅದರಿಂದ ಕೆಟ್ಟ ವಾಸನೆ ಬರುತ್ತಿತ್ತು ಅಂತಾ ಹಾಸ್ಯ ಮಾಡಿದ್ದಾರೆ.

ಬ್ರೂಸ್ ಅವರ ಬಳಿ ತರಬೇತಿ ಪಡೆಯುತ್ತಿದ್ದ ಇಬ್ಬರು ಯುವಕರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಬ್ರೂಸ್ ಗೆ ಈಗ 61 ವರ್ಷ ವಯಸ್ಸು. 1981-88ರ ಅವಧಿಯಲ್ಲಿ ಬ್ರೂಸ್ ಸತತ 8 ಬಾರಿ ಮ್ಯಾರಥಾನ್ ಗೆದ್ದಿದ್ರು. ಸರಿಸುಮಾರು 56 ಮೈಲು ದೂರ ಓಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...