alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಟೀಂ ಇಂಡಿಯಾದ ಖ್ಯಾತ ಆಟಗಾರ ಬುಕ್ಕಿ ಜೊತೆ ಸಂಪರ್ಕದಲ್ಲಿದ್ದ ‘ಸ್ಪೋಟಕ’ ಮಾಹಿತಿ ಬಹಿರಂಗ

2008-09 ರಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಪಂದ್ಯಾವಳಿ ಸಂದರ್ಭದಲ್ಲಿ ಟೀಮ್ ಇಂಡಿಯಾದ ಖ್ಯಾತ ಆಟಗಾರರೊಬ್ಬರು ಬುಕ್ಕಿಯೊಬ್ಬನ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಐಪಿಎಲ್ ಬೆಟ್ಟಿಂಗ್ ಕುರಿತು ತನಿಖೆ ನಡೆಸುತ್ತಿದ್ದ ತಂಡದ ನೇತೃತ್ವ ವಹಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಬಿ.ಬಿ. ಮಿಶ್ರಾ ಬಿಚ್ಚಿಟ್ಟಿದ್ದು, ತಮಗೆ  ತನಿಖೆಗಾಗಿ ಸೀಮಿತ ಕಾಲಾವಧಿ ಇದ್ದ ಕಾರಣ ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗಲಿಲ್ಲವೆಂದು ಹೇಳಿದ್ದಾರೆ.

ಬುಕ್ಕಿಯೊಂದಿಗೆ ಸಂಪರ್ಕದಲ್ಲಿದ್ದ ಟೀಮ್ ಇಂಡಿಯಾ ಆಟಗಾರ 2011 ರ ವಿಶ್ವಕಪ್ ವಿಜೇತ ತಂಡದಲ್ಲಿಯೂ ಇದ್ದರೆಂದು ಮಿಶ್ರಾ ತಿಳಿಸಿದ್ದು, ಆದರೆ ಆ ಆಟಗಾರ ಯಾರು ಎಂಬ ಕುರಿತು ಹೆಸರು ಬಹಿರಂಗಪಡಿಸಿಲ್ಲ.

ಆಟಗಾರ, ಬುಕ್ಕಿ ಜೊತೆ ಸಂಭಾಷಣೆ ನಡೆಸಿದ್ದ ಆಡಿಯೋ ಕೂಡಾ ಲಭ್ಯವಾಗಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಆಟಗಾರ ಮತ್ತು ಬುಕ್ಕಿಯ ವಾಯ್ಸ್ ಸ್ಯಾಂಪಲ್ ಪಡೆದುಕೊಂಡು ಅದನ್ನು ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಬೇಕಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲವೆಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...