alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಬೆಲೆಗೆ ಹರಾಜಾದ ಟಾಪ್ 10 ಆಟಗಾರರ ಪಟ್ಟಿ

ಇಂಡಿಯನ್ ಪ್ರಿಮಿಯರ್ ಲೀಗ್ ನ 11 ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಅದ್ದೂರಿ ಸಮಾರಂಭದಲ್ಲಿ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ.

51 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಗಳಲ್ಲಿ ಒಟ್ಟು 8 ತಂಡಗಳು ಅಂತಿಮ ಗೆಲುವಿಗಾಗಿ ಸೆಣೆಸಲಿದ್ದು, ಫೈನಲ್ ಪಂದ್ಯ ಮೇ 27 ರಂದು ಮುಂಬೈನಲ್ಲೇ ನಡೆಯಲಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನಲೆಯಲ್ಲಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮರಳಿ ಬಂದಿದ್ದು, ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಇದರ ಮಧ್ಯೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮೂಲ ಆಟಗಾರರನ್ನು ಹೊರತುಪಡಿಸಿ ಕೆಲ ಆಟಗಾರರು ಅಚ್ಚರಿಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಅಂತಹ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ಬೆನ್ ಸ್ಟೋಕ್ಸ್ (ರಾಜಸ್ಥಾನ್ ರಾಯಲ್ಸ್) – 12.5 ಕೋಟಿ ರೂ.

ಜಯ್ ದೇವ್ ಉನಾದ್ಕಟ್ (ರಾಜಸ್ಥಾನ್ ರಾಯಲ್ಸ್) – 11.5 ಕೋಟಿ ರೂ.

ಕೆ.ಎಲ್. ರಾಹುಲ್ (ಕಿಂಗ್ಸ್ XI ಪಂಜಾಬ್) – 11 ಕೋಟಿ ರೂ.

ಮನೀಷ್ ಪಾಂಡೆ (ಸನ್ ರೈಸರ್ಸ್ ಹೈದರಾಬಾದ್) – 11 ಕೋಟಿ ರೂ.

ಕ್ರಿಸ್ ಲ್ಯಾನ್ (ಕೋಲ್ಕತ್ತಾ ನೈಟ್ ರೈಡರ್ಸ್) – 9.6 ಕೋಟಿ ರೂ.

ಮೈಕೆಲ್ ಸ್ಟಾರ್ಕ್ (ಕೋಲ್ಕತ್ತಾ ನೈಟ್ ರೈಡರ್ಸ್) – 9.4 ಕೋಟಿ ರೂ.

ಗ್ಲೆನ್ ಮ್ಯಾಕ್ಸ್ ವೆಲ್ (ಡೆಲ್ಲಿ ಡೇರ್ ಡೆವಿಲ್ಸ್) – 9 ಕೋಟಿ ರೂ.

ರಶೀದ್ ಖಾನ್ (ಸನ್ ರೈಸರ್ಸ್ ಹೈದರಾಬಾದ್) – 9 ಕೋಟಿ ರೂ.

ಕೃಣಾಲ್ ಪಾಂಡ್ಯಾ (ಮುಂಬೈ ಇಂಡಿಯನ್ಸ್) – 8.8 ಕೋಟಿ ರೂ.

ಸಂಜು ಸ್ಯಾಮ್ಸನ್ (ರಾಜಸ್ಥಾನ್ ರಾಯಲ್ಸ್) – 8 ಕೋಟಿ ರೂ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...