alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ – ಕುಂಬ್ಳೆ ಜಗಳದಲ್ಲಿ ಟಾಮ್ ಮೂಡಿಗೆ ಲಾಭ..?

tom-moody_2504bcci_875

ಟೀಂ ಇಂಡಿಯಾ ತರಬೇತುದಾರ ಹುದ್ದೆಗೆ ಅರ್ಜಿ ಸಲ್ಲಿಸಿರುವ ದಿಗ್ಗಜರ ಪೈಕಿ ಸನ್ ರೈಸರ್ಸ್ ಹೈದ್ರಾಬಾದ್ ಕೋಚ್ ಟಾಮ್ ಮೂಡಿ ಹೆಸರು ಕೇಳಿಬರ್ತಾ ಇದೆ. ಆದ್ರೆ ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಭಾರತ ಕ್ರಿಕೆಟ್ ತಂಡದ ಬಗ್ಗೆ ಮೂಡಿ, ಸಾಕಷ್ಟು ತಿಳಿದುಕೊಂಡಿರೋದ್ರಿಂದ ಬಿಸಿಸಿಐ ಅವರಿಗೇ ಮಣೆ ಹಾಕೋ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರ್ತಿವೆ.

2001ರಲ್ಲಿ ನಿವೃತ್ತಿ ಪಡೆದಿದ್ದ ಮೂಡಿ, ಶ್ರೀಲಂಕಾ ತಂಡದ ತರಬೇತುದಾರರಾಗಿದ್ದರು. ಅವರ ತರಬೇತಿಯಲ್ಲೇ ಲಂಕಾ ತಂಡ 2007ರ ವಿಶ್ವಕಪ್ ಫೈನಲ್ ತಲುಪಿತ್ತು. 2005ರಲ್ಲೇ ಟಾಮ್ ಮೂಡಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗ್ತಾರೆ ಅನ್ನೋ ಸುದ್ದಿಯಿತ್ತು. ಆದ್ರೆ ಗ್ರೆಗ್ ಚಾಪೆಲ್ ಹುದ್ದೆಯನ್ನು ತಮ್ಮದಾಗಿಸಿಕೊಂಡಿದ್ರು.

ಕಳೆದ ವರ್ಷ ಕೂಡ ಮೂಡಿ ಹೆಸರು ಕೇಳಿ ಬಂದಿತ್ತು. ಆದ್ರೆ ಸಚಿನ್, ಸೌರವ್ ಮತ್ತು ಲಕ್ಷ್ಮಣ್ ರ ಸಿಎಸಿ ಅನಿಲ್ ಕುಂಬ್ಳೆಯನ್ನು ಕೋಚ್ ಆಗಿ ಆಯ್ಕೆ ಮಾಡಿತ್ತು. ಕೊಹ್ಲಿ ಹಾಗೂ ಕುಂಬ್ಳೆ ನಡುವಣ ಮುನಿಸಿಗೆ ಇದು ಸೂಕ್ತ ಸಮಯವಲ್ಲ ಅಂತಾ ಸೌರವ್ ಗಂಗೂಲಿ ಕೂಡ ಹೇಳಿದ್ದಾರೆ. ಆದ್ರೆ ಹರ್ಭಜನ್ ಸಿಂಗ್ ಮಾತ್ರ ಕುಂಬ್ಳೆಯನ್ನು ಬೆಂಬಲಿಸಿದ್ದಾರೆ.

ಅದೇನೇ ಆದ್ರೂ ಭಾರತ ತಂಡದಲ್ಲಿ ಕೋಚ್ ಗಳ ವಿವಾದ ಹೊಸದೇನೂ ಅಲ್ಲ. ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ತಮಗೆ ಕೋಚ್ ಹುದ್ದೆಯಲ್ಲಿ ಯಾವುದೇ ಆಸಕ್ತಿಯಿಲ್ಲ ಅಂತಾ ಈಗಾಗ್ಲೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಟಾಮ್ ಮೂಡಿ ಪ್ರಬಲ ಸ್ಪರ್ಧಿ ಎನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...