alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಚ್ ಆಗಿ ಕೊಹ್ಲಿಗೆ ಬುದ್ಧಿ ಕಲಿಸ್ತಾರಂತೆ ಎಂಜಿನಿಯರ್

coach

ಉಪೇಂದ್ರನಾಥ್ ಬ್ರಹ್ಮಚಾರಿ ಒಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್. ಕ್ರಿಕೆಟಿಗನಲ್ಲದೇ ಇದ್ರೂ ಟೀಂ ಇಂಡಿಯಾದ ಕೋಚ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಹಂಕಾರಿ ವಿರಾಟ್ ಕೊಹ್ಲಿಯನ್ನು ಸರಿದಾರಿಗೆ ತರಬೇಕು ಅನ್ನೋ ಕಾರಣಕ್ಕೆ ಇವರು ಭಾರತ ತಂಡದ ತರಬೇತುದಾರನಾಗಲು ಬಯಸ್ತಾರಂತೆ.

30 ವರ್ಷದ ಉಪೇಂದ್ರನಾಥ್ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾರೆ. ಬಿಸಿಸಿಐ ವೆಬ್ ಸೈಟ್ ನಲ್ಲಿದ್ದ ಇಮೇಲ್ ಅಡ್ರೆಸ್ ತೆಗೆದುಕೊಂಡು ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾರೆ. ಅನಿಲ್ ಕುಂಬ್ಳೆ ಕೋಚ್ ಹುದ್ದೆ ತೊರೆಯಲು ವಿರಾಟ್ ಕೊಹ್ಲಿಯೇ ಕಾರಣ ಅನ್ನೋದು ಇವರ ಅಭಿಪ್ರಾಯ.

ಉಪೇಂದ್ರನಾಥ್ ಅವರ ಅರ್ಜಿಯಲ್ಲಿ ವ್ಯಾಕರಣ ದೋಷಗಳು ಸಾಕಷ್ಟಿವೆ.” ಕೊಹ್ಲಿಗೆ ತರಬೇತುದಾರರಾಗಿ ಕ್ರಿಕೆಟ್ ಲೆಜೆಂಡ್ ಗಳ ಅಗತ್ಯವಿಲ್ಲ, ಮಾಜಿ ಆಟಗಾರರನ್ನು ಕೋಚ್ ಮಾಡಿದ್ರೆ ಅವರನ್ನು ಕೊಹ್ಲಿ ಅವಮಾನಿಸ್ತಾರೆ, ಕುಂಬ್ಳೆಗೆ ಆದ ಗತಿಯೇ ಅವರಿಗೂ ಆಗುತ್ತದೆ. ಕೊಹ್ಲಿಯ ಅಹಂಕಾರಿ ವರ್ತನೆಗೆ ನಾನು ಅಡ್ಜಸ್ಟ್ ಆಗ್ತೇನೆ, ಅವರನ್ನು ಸರಿದಾರಿಗೆ ತರ್ತೇನೆ. ನನ್ನನ್ನು ಹೆಡ್ ಕೋಚ್ ಮಾಡಿ” ಅಂತಾ ಅರ್ಜಿಯಲ್ಲಿ ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...