alex Certify
ಕನ್ನಡ ದುನಿಯಾ       Mobile App
       

Kannada Duniya

ಹರ್ಭಜನ್ ಟ್ವೀಟ್ ಗೆ ಹೀಗೆ ಉತ್ತರ ನೀಡಿದ್ದಾರೆ 650 ಮಹಿಳೆಯರ ಜೊತೆ ಸಂಬಂಧ ಬೆಳೆಸಿದ್ದ ಆಟಗಾರ

ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ನಲ್ಲಿ ದಾಖಲೆ ಜಯ ಸಾಧಿಸಿದೆ. ಈ ಗೆಲುವಿನ ನಂತ್ರ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅನೇಕರ ಟೀಕೆ ಹೊರಬಿದ್ದಿದೆ. ಹರ್ಭಜನ್ ಸಿಂಗ್ ಕೂಡ ವೆಸ್ಟ್ ಇಂಡೀಸ್ ಕಾಲೆಳೆದಿದ್ದರು. ವೆಸ್ಟ್ ಇಂಡೀಸ್ ರಣಜಿ ಪಂದ್ಯದಲ್ಲಿ ಆಡಲೂ ಯೋಗ್ಯವಲ್ಲ ಎಂದಿದ್ದರು. ಹರ್ಭಜನ್ ಹೇಳಿಕೆಗೆ ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಟಿನೋ ಬೆಸ್ಟ್ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹರ್ಭಜನ್ ಟ್ವೀಟ್ ಗೆ ಉತ್ತರ ನೀಡಿದ ಟಿನೋ ಬೆಸ್ಟ್, ಈ ರೀತಿಯ ಅಹಂಕಾರಿ ಟ್ವೀಟ್ ಇಂಗ್ಲೆಂಡ್ ವಿರುದ್ಧ ಕಾಣಲಿಲ್ಲ. ಹೊಸ ತಂಡ ಆಟ ಕಲಿಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಟಿನೋ ಬೆಸ್ಟ್ ಬಗ್ಗೆ ಹೇಳೋದಾದ್ರೆ ಅವ್ರು 500-650 ಹುಡುಗಿಯರ ಜೊತೆ ಸಂಬಂಧ ಬೆಳೆಸಿದ್ದರಂತೆ. ಈ ವಿಷ್ಯವನ್ನು ಟಿನೋ ಬೆಸ್ಟ್ ಒಪ್ಪಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಬಂದ ಆಟೋಬಯೋಗ್ರಫಿಯಲ್ಲಿ ತಾನು ಪುರುಷ ವೇಶ್ಯೆ ಎಂಬುದನ್ನು ಒಪ್ಪಿಕೊಂಡಿದ್ದರು. ನಾನು ಹುಡುಗಿಯರನ್ನು ಪ್ರೀತಿ ಮಾಡ್ತೇನೆ. ಅವ್ರು ಪ್ರೀತಿ ಮಾಡ್ತಾರೆ ಎಂದು ಹೇಳಿದ್ದರು. ತಲೆ ಕೂದಲಿಲ್ಲದ ಅತಿ ಸುಂದರ ಪುರುಷ ನಾನು ಎಂದು ಟಿನೋ ಬೆಸ್ಟ್ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...