alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯ ಈ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ

d

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಹಾಗೂ ಅದ್ಭುತ ಆಟಗಾರ ಮಹೇಂದ್ರ ಸಿಂಗ್ ಧೋನಿ. ಲಕ್ಷಾಂತರ ಯುವಕರಿಗೆ ಧೋನಿ ಪ್ರೇರಣೆಯಾಗಿದ್ದಾರೆ. ಬ್ಯಾಟಿಂಗ್, ಕೀಪಿಂಗ್ ಕೌಶಲ್ಯಗಳಂತೂ ಬೆರಗು ಹುಟ್ಟಿಸುತ್ತವೆ. ಎಂತಹ ಒತ್ತಡದ ಸ್ಥಿತಿಯನ್ನಾದ್ರೂ ಶಾಂತವಾಗಿ ನಿಭಾಯಿಸಬಲ್ಲ ಚತುರ ಧೋನಿ.

ತಮ್ಮ ಬದುಕಿನ ಬಗ್ಗೆ ಖುದ್ದು ಧೋನಿ ಮಾತನಾಡಿದ್ದಾರೆ. ಬಾಲ್ಯ, ಬೆಳೆದು ಬಂದ ಹಾದಿ ಎಲ್ಲವನ್ನೂ ವಿಡಿಯೋ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ. ಯಾವುದೇ ನಿರ್ದಿಷ್ಟ ಗುರಿ ಮತ್ತು ಹಂಬಲವಿಲ್ಲದೆ ಸಾಧನೆ ಮಾಡಿದವರು ಧೋನಿ. ಹಾಗಾಗಿ ಯಾವುದೇ ಮೈಲಿಗಲ್ಲನ್ನು ಅರಸಿ ಹೋಗಬೇಡಿ, ಪ್ರಾಮಾಣಿಕ ಪ್ರಯತ್ನ ಮಾಡಿದ್ರೆ ಅದನ್ನು ತನ್ನಿಂತಾನೇ ಸಾಧಿಸಬಹುದು ಅಂತಾ ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಹಳೆಯದನ್ನೆಲ್ಲ ಮರೆತುಬಿಡಿ, ವರ್ತಮಾನ ಕಾಲದ ಬಗ್ಗೆ ಮಾತ್ರ ಆಲೋಚಿಸಿ. ತಪ್ಪುಗಳಿಂದ ಪಾಠ ಕಲಿಯಿರಿ ಅನ್ನೋದು ಅವರ ಅನುಭವದ ಮಾತು. ಬದುಕಿನಲ್ಲಿ ಕಷ್ಟಗಳು ಸರ್ವೇಸಾಮಾನ್ಯ. ಅದನ್ನೆಲ್ಲ ಸಮಚಿತ್ತದಿಂದ ಎದುರಿಸಿ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿದ್ರೆ ಯಶಸ್ಸು ಸಾಧ್ಯ ಅಂತಾ ತಿಳಿಹೇಳಿದ್ದಾರೆ ಧೋನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...