alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ್ ರಹೀಂ ಜೊತೆ ಕೊಹ್ಲಿ, ವೈರಲ್ ಆಗಿದೆ ವಿಡಿಯೋ

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಸಿಂಗ್ ಹಾಗೂ ವಿರಾಟ್ ಕೊಹ್ಲಿ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಕೊಹ್ಲಿ ಮಾತ್ರವಲ್ಲ, ಆಶಿಶ್ ನೆಹ್ರಾ, ಶಿಖರ್ ಧವನ್ ಹಾಗೂ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ವಿಜಯ್ ದಹಿಯಾ ಕೂಡ ಬಾಬಾ ಆಶೀರ್ವಾದ ಪಡೆದಿದ್ದಾರೆ.

ರಾಮ್ ರಹೀಂ ದೋಷಿ ಅಂತಾ ಸಿಬಿಐ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಈ ಹಳೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ವಿರಾಟ್ ಕೊಹ್ಲಿ ಕೂಡ ರಾಮ್ ರಹೀಂ ಅನುಯಾಯಿಯಾಗಿದ್ದರಾ ಎಂಬ ಪ್ರಶ್ನೆ ಈಗ ಮೂಡಿದೆ. ಈ ಹಿಂದೆ ಕೊಹ್ಲಿಗೆ ತರಬೇತಿ ನೀಡಿದ್ದೇ ನಾನು ಅಂತಾ ರಾಮ್ ರಹೀಂ ಹೇಳಿಕೊಂಡಿದ್ದ.

ಕೊಹ್ಲಿಗೆ ಒಳ್ಳೆ ಓಪನಿಂಗ್ ಸಿಕ್ಕಿದ್ರೂ ಬಿಗ್ ಸ್ಕೋರ್ ಮಾಡಲು ಸಾಧ್ಯವಾಗ್ತಿರಲಿಲ್ಲ. ಯಾವ ರೀತಿ ಅಭ್ಯಾಸ ಮಾಡಬೇಕು ಅನ್ನೋದನ್ನು ನಾನೇ ಹೇಳಿಕೊಟ್ಟಿದ್ದೇನೆ ಅಂತಾ ಬಾಬಾ ಬೆನ್ನುತಟ್ಟಿಕೊಂಡಿದ್ದ. ನಾನು ತರಬೇತಿ ನೀಡಿದ ಯುವಕರೆಲ್ಲ ದೇಶಕ್ಕೆ ಹೆಮ್ಮೆ ತರ್ತಿದ್ದಾರೆ. ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ವಿರಾಟ್ ಕೊಹ್ಲಿಗೂ ಮಾರ್ಗದರ್ಶನ ಮಾಡಿದ್ದೇನೆ ಅಂತಾ ಹೇಳಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...