alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ಕ್ರಿಕೆಟ್ ದೇವರ’ ಈ ವಿಡಿಯೋ

ಕ್ರಿಕೆಟ್ ಜಗತ್ತಿನ ದಂತ ಕಥೆ ಸಚಿನ್ ತೆಂಡೂಲ್ಕರ್ ನಿವೃತ್ತಿ ನಂತರವೂ ಕ್ರೀಡಾ ಪ್ರೇಮಿಗಳ ಆರಾಧ್ಯ ದೈವವಾಗಿದ್ದಾರೆ. ಸಚಿನ್ ರ ಕ್ರಿಕೆಟ್ ಪ್ರೀತಿ ಇಂದಿಗೂ ಮನೆ ಮಾತಾಗಿದೆ. ಈಗಲೂ ಕಿರಿಯ ಆಟಗಾರರಿಗೆ ಸಚಿನ್ ಮಾರ್ಗದರ್ಶನ ಮಾಡುತ್ತಾರೆ.

ಕ್ರಿಕೆಟ್ ಜಗತ್ತಿನಲ್ಲಿ ಉತ್ತುಂಗದ ಶಿಖರವೇರಿದಾಗಲೂ ಸಚಿನ್ ತಮ್ಮ ಸೀದಾ ಸಾದಾ ನಡವಳಿಕೆಯಿಂದಾಗಿ ಎಲ್ಲರ ಮನ ಗೆದ್ದಿದ್ದರು. ತಮ್ಮ 15 ನೇ ವಯಸ್ಸಿನಲ್ಲೇ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿಟ್ಟಿದ್ದ ಸಚಿನ್ ತೆಂಡೂಲ್ಕರ್ ನಿವೃತ್ತಿಯವರೆಗೂ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಈಗ ಸಚಿನ್ ತೆಂಡೂಲ್ಕರ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಮುಂಬೈನ ವಿಲೇಪಾರ್ಲೆಯಲ್ಲಿ ಹೋಟೆಲ್ ಉದ್ಯೋಗಿಗಳ ಜೊತೆ ಸಚಿನ್ ಟೆನಿಸ್ ಬಾಲ್ ನಲ್ಲಿ ಕ್ರಿಕೆಟ್ ಆಡಿದ್ದಾರೆ. ರಸ್ತೆಯಲ್ಲೇ ಬ್ಯಾಟಿಂಗ್ ಮಾಡಿದ ಸಚಿನ್ ಈ ವೇಳೆ ಮಾರ್ಗದರ್ಶನವನ್ನೂ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...