alex Certify
ಕನ್ನಡ ದುನಿಯಾ       Mobile App
       

Kannada Duniya

ಸೋತರೂ ಭಾರತ ತಂಡಕ್ಕೆ ಕೋಚ್ ಶಾಸ್ತ್ರಿಯ ಮೆಚ್ಚುಗೆ

ಲಂಡನ್: ಇಂಗ್ಲೆಂಡ್‍ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಮ್ಯಾಚ್‍ನಲ್ಲಿ ಭಾರತ ತಂಡ ಸೋತಿದ್ದರೂ ಅದು ತಂಡದ ಕೋಚ್ ರವಿಶಾಸ್ತ್ರಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಬುಧವಾರ ನಡೆದ ಸೌತಂಪ್ಟನ್ ನಾಲ್ಕನೇ ಟೆಸ್ಟ್ ನಲ್ಲಿ ಭಾರತದ ತಂಡ 60 ರನ್‍ಗಳಿಂದ ಸೋಲು ಕಂಡಿದೆ. ಆದರೆ, “ಸಾಗರೋತ್ತರ ದೇಶದಲ್ಲಿ ಭಾರತ ಕಳೆದ 15ರಿಂದ 20 ವರ್ಷಗಳಲ್ಲಿ ತೋರಿದ ಪ್ರದರ್ಶನಕ್ಕಿಂತ ಈ ತಂಡ ಉತ್ತಮವಾಗಿ ಆಡಿದೆ” ಎಂದು ಶಾಸ್ತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಮ್ಮ ತಂಡದ ಆಟಗಾರರು ಕಠಿಣ ಪರಿಶ್ರಮ ವಹಿಸಿ ಆಡಿದ್ದಾರೆ. ಅವರ ಮುಂದಿನ ಸಾಹಸ ಚೆನ್ನಾಗಿ ಆಟವಾಡಿ ಗೆಲ್ಲುವುದು. ಕಳೆದ ಮೂರು ವರ್ಷಗಳಿಗೆ ಹೋಲಿಸಿ ನೋಡಿದರೆ ನಾವು ಸಾಗರೋತ್ತರ ದೇಶದಲ್ಲಿ 9 ಪಂದ್ಯಗಳನ್ನು ಹಾಗೂ ಮೂರು ಸರಣಿಗಳನ್ನು ಗೆದ್ದಿದ್ದೇವೆ. ಮಾತ್ರವಲ್ಲ, ಕಳೆದ 15-20 ವರ್ಷಗಳಲ್ಲಿ ಭಾರತದ ಯಾವ ತಂಡವೂ ಕಡಿಮೆ ಅವಧಿಯಲ್ಲಿ ನಮ್ಮಷ್ಟು ರನ್ ಗಳಿಸಿದ್ದನ್ನು ನಾನು ಕಂಡಿಲ್ಲ. ಅಲ್ಲದೆ ಈ ಸರಣಿಯಲ್ಲಿ ಕೆಲವು ಶ್ರೇಷ್ಠ ಕ್ರಿಕೆಟ್ ಪಟುಗಳು ಆಟ ಆಡುತ್ತಿರುವುದರಿಂದ ಗೆಲ್ಲುವ ಭರವಸೆ ಇದೆ. ಆದರೆ ಅವರು ಇನ್ನಷ್ಟು ಮಾನಸಿಕ ಸ್ಥೈರ್ಯ ತಂದುಕೊಳ್ಳಬೇಕು ಎಂದು ರವಿಶಾಸ್ತ್ರಿ ಅವರು ತಂಡವನ್ನು ಹುರಿದುಂಬಿಸುವ ಮಾತುಗಳನ್ನು ಆಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...