alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸಚಿನ್ ಪಾದ ಮುಟ್ಟಿ ನಮಸ್ಕರಿಸಿದ ಕಾಂಬ್ಳಿ ಫೋಟೋ

ಕ್ರಿಕೆಟ್ ಜಗತ್ತಿನ ದಂತ ಕಥೆ ಸಚಿನ್ ತೆಂಡೂಲ್ಕರ್ ಶಾಲಾ ದಿನಗಳಲ್ಲೇ ತಮ್ಮ ಸಹಪಾಠಿ ವಿನೋದ್ ಕಾಂಬ್ಳಿ ಜೊತೆ ದಾಖಲೆಯ ಜೊತೆಯಾಟವಾಡಿ ಮನೆ ಮಾತಾಗಿದ್ದರು.

ಬಾಲ್ಯ ಸ್ನೇಹಿತರಿಬ್ಬರು ಟೀಮ್ ಇಂಡಿಯಾಗೆ ಆಯ್ಕೆಯಾದ ಬಳಿಕ ಸಚಿನ್ ತೆಂಡೂಲ್ಕರ್ ತಮ್ಮ ಪರ್ಫಾಮೆನ್ಸ್ ಕಾಯ್ದುಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರೆ ವಿನೋದ್ ಕಾಂಬ್ಳಿ ಆ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು.

ಈ ಮಧ್ಯೆ ಬಾಲ್ಯ ಸ್ನೇಹಿತ ಸಚಿನ್ ಕುರಿತು ವಿನೋದ್ ಕಾಂಬ್ಳಿ ಆಡಿದ ಮಾತೊಂದು ಇಬ್ಬರ ನಡುವೆ ಕಂದಕ ಸೃಷ್ಟಿಸುವಂತೆ ಮಾಡಿತ್ತು. ಕ್ರಿಕೆಟ್ ಜಗತ್ತಿನಲ್ಲಿ ವಿಫಲತೆ ಕಂಡ ಕಾಂಬ್ಳಿ, ಚಿತ್ರರಂಗಕ್ಕೆ ಕಾಲಿಟ್ಟರೂ ಅಲ್ಲೂ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.

ಈ ಅಂತರದ ನಡುವೆ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಸ್ನೇಹಿತರು ಇಬ್ಬರ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಯತ್ನಿಸಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದರು. ವಿನೋದ್ ಕಾಂಬ್ಳಿಯ ಪಾರ್ಟಿಯೊಂದರಲ್ಲಿ ಹಳೆ ಸ್ನೇಹಿತರೊಂದಿಗೆ ಸಚಿನ್ ಕಾಣಿಸಿಕೊಂಡಿದ್ದರು.

ಈ ಮಧ್ಯೆ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಿನೋದ್ ಕಾಂಬ್ಳಿ, ಸಚಿನ್ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಆಗ ಕಾಂಬ್ಳಿಯನ್ನು ತಡೆದ ಸಚಿನ್ ಆತ್ಮೀಯವಾಗಿ ಅಪ್ಪಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...