alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವಿರಾಟ್ ಕೊಹ್ಲಿಯ ಈ ಫೋಟೋ

virat kohli old photoಭಾನುವಾರದಂದು ಮೊಹಾಲಿಯಲ್ಲಿ ನಡೆದ ವಿಶ್ವ ಕಪ್ ಟಿ20 ಯ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಆಮೋಘ ಆಟವಾಡಿ ಭಾರತದ ಭರ್ಜರಿ ಗೆಲುವಿಗೆ ಕಾರಣಕರ್ತರಾದ ವಿರಾಟ್ ಕೊಹ್ಲಿಯವರ ಗುಣಗಾನ ಮಾಡುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.

ಈ ಬಾರಿಯ ವಿಶ್ವಕಪ್ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿಯವರಿಗೆ ಅಭಿಮಾನ ಬಳಗವೂ ಹೆಚ್ಚಾಗಿದ್ದು, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಈ ಮಧ್ಯೆ ಸಾಮಾಜಿಕ ಜಾಲ ತಾಣಗಳಲ್ಲಿ ವಿರಾಟ್ ಕೊಹ್ಲಿಯವರ ಬಾಲ್ಯದ ಫೋಟೋವೊಂದು ಹರಿದಾಡುತ್ತಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಭಾರತ ತಂಡದ ಹಿರಿಯ ಆಟಗಾರ ಆಶಿಶ್ ನೆಹ್ರಾ, ಕೊಹ್ಲಿ ನೇತೃತ್ವದ ಸ್ಥಳೀಯ ಕ್ರಿಕೆಟ್ ತಂಡ ವಿಜೇತವಾಗಿದ್ದ ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಪತ್ರ ನೀಡುತ್ತಿರುವ ಚಿತ್ರ ಇದಾಗಿದೆ.

ಬಾಲ್ಯದಿಂದಲೇ ತಮ್ಮ ಅದ್ಬುತ ಕ್ರಿಕೆಟ್ ಪ್ರತಿಭೆಯಿಂದ ಈ ಮಟ್ಟಕ್ಕೆ ಏರಿರುವ ವಿರಾಟ್ ಕೊಹ್ಲಿ, 2011 ರಲ್ಲಿ ನಡೆದ ವಿಶ್ವ ಕಪ್ ವೇಳೆ ಅಶೀಶ್ ನೆಹ್ರಾ ಜೊತೆ ಸಹ ಆಟಗಾರರಾಗಿದ್ದರು. ಇದಾದ 5 ವರ್ಷಗಳ ಬಳಿಕ ಈಗ ಮತ್ತೆ ವಿರಾಟ್ ಕೊಹ್ಲಿ ಮತ್ತು ಅಶೀಶ್ ನೆಹ್ರಾ ತಂಡದಲ್ಲಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...