alex Certify
ಕನ್ನಡ ದುನಿಯಾ       Mobile App
       

Kannada Duniya

ವಾಘಾ ಗಡಿಯಲ್ಲಿ ನಡೆದ ಪರೇಡ್ ವೇಳೆ ಪಾಕ್ ಕ್ರಿಕೆಟಿಗನ ಹುಚ್ಚಾಟ

ವಾಘಾ ಗಡಿಯಲ್ಲಿ ಪಾಕಿಸ್ತಾನದ ಕ್ರಿಕೆಟರ್ ಹಸನ್ ಅಲಿ, ಭಾರತೀಯ ಸೇನೆಯ ಪರೇಡ್ ಗೆ ಅವಮಾನ ಮಾಡುವಂತಹ ಕೃತ್ಯ ನಡೆಸಿದ್ದಾನೆ. ಗಡಿಯಲ್ಲಿ ಎಂದಿನಂತೆ ಪರೇಡ್ ನಡೆಸಲಾಗುತ್ತಿತ್ತು. ಈ ಪರೇಡ್ ನಲ್ಲಿ ಭಾರತದ ಬಿಎಸ್ಎಫ್ ಯೋಧರು ಹಾಗೂ ಪಾಕಿಸ್ತಾನದ ರೇಂಜರ್ಸ್ ಮಾತ್ರ ಪಾಲ್ಗೊಳ್ಳಬೇಕು.

ಆದ್ರೆ ಮಧ್ಯಪ್ರವೇಶಿಸಿದ ಪಾಕ್ ಕ್ರಿಕೆಟಿಗ ಹಸನ್ ಅಲಿ, ಬಾಂಬ್ ಸ್ಫೋಟದ ಅನುಕರಣೆ ಮಾಡಿದ್ದಾರೆ. ಈ ಮೂಲಕ ಪ್ರೇಕ್ಷಕರನ್ನು ರಂಜಿಸುವುದು ಅವರ ಪ್ರಯತ್ನ. ಆದ್ರೆ ಇದು ಪರೇಡ್ ಗೌರವಕ್ಕೆ ಧಕ್ಕೆ ತಂದಿರುವುದರಿಂದ ಪಾಕ್ ರೇಂಜರ್ಸ್ ವಿರುದ್ಧ ಪ್ರತಿಭಟನೆ ನಡೆಸಲು ಬಿಎಸ್ಎಫ್ ನಿರ್ಧರಿಸಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್-ಐರ್ಲೆಂಡ್ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಗೂ ಮುನ್ನ ರಿಫ್ರೆಶ್ ಆಗಲೆಂದೇ ಆಟಗಾರರು ವಾಘಾ ಗಡಿಗೆ ಬಂದಿದ್ದರಂತೆ. ಅಷ್ಟಕ್ಕೂ ಇದು ನಾಯಕ ಸರ್ಫರಾಜ್ ಅಹ್ಮದ್ ಅವರ ಐಡಿಯಾ. ಆದ್ರೆ ಪರೇಡ್ ನೋಡಲು ಬಂದಿದ್ದ ಪಾಕ್ ಕ್ರಿಕೆಟಿಗರು, ಉತ್ತೇಜನಕಾರಿ ವರ್ತನೆ ತೋರಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...