alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಕಳಕಳಿ ಮೆರೆದ ಸ್ಟಾರ್ ಬ್ಯಾಟ್ಸ್ ಮನ್

ಮೈದಾನದಲ್ಲಿ ಬೌಲರ್ ಗಳನ್ನು ಕಾಡುತ್ತಿದ್ದ ವೀರೇಂದ್ರ ಸೆಹ್ವಾಗ್, ಸದ್ಯ ಟ್ವಿಟರ್ ನಲ್ಲಿ ತಮ್ಮ ಅನಿಸಿಕೆಗಳನ್ನು ಹಾಕುವ ಮೂಲಕ ಚರ್ಚೆಯಲ್ಲಿರುತ್ತಾರೆ. ಇತ್ತೀಚಿಗೆ ಸೆಹ್ವಾಗ್ ತಮ್ಮ ಸಾಮಾಜಿಕ ತಾಣದಲ್ಲಿ ಒಂದು ಫೋಟೋ ಹಾಕಿದ್ದು, ಚರ್ಚೆಯ ವಿಷಯವಾಗಿದೆ.

ಸೆಹ್ವಾಗ್ ಹಾಕಿದ ಫೋಟೋ, ಶಾಲಾ ಪಠ್ಯ ಪುಸ್ತಕದ್ದಾಗಿದೆ. ಈ ಬುಕ್ ನಲ್ಲಿ ಅವಿಭಕ್ತ ಕುಟುಂಬದಲ್ಲಿ ಸಂತೋಷ ಹಾಗೂ ನೆಮ್ಮದಿ ಸಿಗೋದಿಲ್ಲ ಎಂದು ಇದೆ. ಈ ಲೈನ್ ಮಾರ್ಕ್ ಮಾಡಿರುವ ಸೆಹ್ವಾಗ್ ಶಾಲೆಗಳಲ್ಲಿ ಕಲಿಸುವ ಶಿಕ್ಷಣವನ್ನು ಜನರ ಮುಂದೆ ತೆರೆದು ಇಟ್ಟಿದ್ದಾರೆ. ಅಲ್ಲದೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದು, ಪುಸ್ತಕದ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಸಂಬಂಧಪಟ್ಟವರು ಸರಿಯಾಗಿ ಕೆಲಸ ಮಾಡಿಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಸೆಹ್ವಾಗ್ ರ ಈ ಟ್ವೀಟ್ ಸಖತ್ ವೈರಲ್ ಆಗಿದ್ದು, ಜನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಹಾಗೂ ಕ್ರಿಕೆಟ್ ಆಟಗಾರರ ಬಗ್ಗೆ ಟ್ವಿಟರ್ ನಲ್ಲಿ ಕಮೆಂಟ್ ಮಾಡ್ತಾ ಇರುತ್ತಾರೆ. ಇಷ್ಟೇ ಅಲ್ಲದೆ ಕೆಲವೊಮ್ಮೆ ಇಂತಹ ಸಮಾಜಿಕ ಕಳಕಳಿ ಇರೋ ಸಂದೇಶಗಳನ್ನು ನೀಡುತ್ತಾ ಇರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...