alex Certify
ಕನ್ನಡ ದುನಿಯಾ       Mobile App
       

Kannada Duniya

ರಹಸ್ಯ ಬಿಚ್ಚಿಟ್ಟಿದ್ದಾಳೆ ಕೊಹ್ಲಿ ಮುಂದೆ ಮದುವೆ ಬೇಡಿಕೆಯಿಟ್ಟಿದ್ದ ಬೆಡಗಿ

ವಿರಾಟ್ ಕೊಹ್ಲಿಯನ್ನು ಇಷ್ಟಪಡದ ಯುವತಿಯರೇ ಇಲ್ಲ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದ ಬೆಡಗಿಯರು ಕೂಡ ಕೊಹ್ಲಿಗೆ ಬೋಲ್ಡ್ ಆಗಿದ್ದರು. ಕೊಹ್ಲಿಯ ಮದುವೆ ಸುದ್ದಿ ಕೇಳಿ ಎಲ್ಲರೂ ನಿರಾಸೆ ಅನುಭವಿಸಿದ್ದು ಸುಳ್ಳಲ್ಲ.

ಇಂಗ್ಲೆಂಡ್ ನ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ಕೂಡ ಅವರಲ್ಲಿ ಒಬ್ಬರು. ಕೊಹ್ಲಿಯ ಅದ್ಭುತ ಬ್ಯಾಟಿಂಗ್ ಗೆ ಮರುಳಾಗಿದ್ದ ಡೇನಿಯಲ್ 2014 ರಲ್ಲೇ ಮದುವೆಯಾಗುವಂತೆ ಪ್ರಪೋಸ್ ಕೂಡ ಮಾಡಿದ್ಲು.

ಕೊಹ್ಲಿ ಮ್ಯಾರಿ ಮಿ ಅಂತಾ ಡೇನಿಯಲ್ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ಅದಾದ ಬಳಿಕ ಕೊಹ್ಲಿಯನ್ನು ಭೇಟಿಯಾದಾಗ, ಅಂತಹ ವಿಷಯವನ್ನೆಲ್ಲ ಟ್ವಿಟ್ಟರ್ ನಲ್ಲಿ ಹಾಕಬಾರದು, ಜನ ಸೀರಿಯಸ್ ಆಗಿ ತೆಗೆದುಕೊಳ್ತಾರೆ ಅಂತಾ ಕೊಹ್ಲಿ ಬುದ್ದಿ ಹೇಳಿದ್ದರಂತೆ.

ಡೇನಿಯಲ್ ಕ್ಷಮೆ ಕೂಡ ಕೇಳಿದ್ಲು. ಭಾರತ ತಂಡ, ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ವೇಳೆ ಡೇನಿಯಲ್ ರನ್ನು ಭೇಟಿಯಾಗಿದ್ದ ಕೊಹ್ಲಿ ಆಕೆಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲಿ ಅದೇ ಬ್ಯಾಟ್ ನಿಂದ ಆಡಲು ಡೇನಿಯಲ್ ನಿರ್ಧರಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...