alex Certify
ಕನ್ನಡ ದುನಿಯಾ       Mobile App
       

Kannada Duniya

ಟೀ ಇಂಡಿಯಾದ ಬ್ಲೂ ಜರ್ಸಿ ಆಯ್ಕೆ ಹಿಂದಿದೆ ಈ ಕಾರಣ…!

blue 1

ಟೀಂ ಇಂಡಿಯಾ ಆಟಗಾರರು ಏಕದಿನ ಪಂದ್ಯಗಳನ್ನಾಡುವಾಗ ನೀಲಿ ಬಣ್ಣದ ಜರ್ಸಿಯನ್ನು ತೊಡುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ನೀಲಿ ಬಣ್ಣದ ಜರ್ಸಿಯನ್ನು ತೊಡುವುದರ ಹಿಂದೆಯೂ ಒಂದು ಕುತೂಹಲಕಾರಿಯಾದ ಸಂಗತಿ ಇದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಟೀಂ ಇಂಡಿಯಾ 2 ಬಾರಿ ವಿಶ್ವಕಪ್ ಜಯಿಸಿದೆ. 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ್ದ ಟೀಂ ಇಂಡಿಯಾ ಆಟಗಾರರ ಡ್ರೆಸ್ ನೀಲಿ ಬಣ್ಣದಾಗಿದ್ದರೂ, ಕೊಂಚ ಬದಲಾವಣೆಯಾಗಿದೆ. ಮೊದಲು ಲೈಟ್ ಬ್ಲೂ ಬಣ್ಣದ ಡ್ರೆಸ್ ಇದ್ದರೆ, ಅದು ಬದಲಾಗಿ ಗಾಢ ನೀಲಿ, ಬಣ್ಣದ ಬಟ್ಟೆಗಳನ್ನು ಟೀಂ ಇಂಡಿಯಾ ಆಟಗಾರರು ಏಕದಿನ ಪಂದ್ಯಗಳಲ್ಲಿ ಹಾಕಿಕೊಳ್ಳುತ್ತಾರೆ.

ಭಾರತದ ರಾಷ್ಟ್ರಧ್ವಜದಲ್ಲಿನ ಬಣ್ಣವೊಂದನ್ನು ಟೀಮ್ ಇಂಡಿಯಾ ಆಟಗಾರರ ಡ್ರೆಸ್ ಗೆ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಕೇಸರಿ ಬಣ್ಣ ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುವುದರಿಂದ ಅದನ್ನು ಕೈ ಬಿಡಲಾಯಿತು. ಬಿಳಿ ಬಣ್ಣದ ಡ್ರೆಸ್ ಈ ಹಿಂದೆಯೇ ಬಳಸಿದ್ದು, ಇನ್ನು ಹಸಿರು ಬಣ್ಣದ ಡ್ರೆಸ್ ಅನ್ನು ನೆರೆ ರಾಷ್ಟ್ರ ಪಾಕಿಸ್ತಾನದ ಆಟಗಾರರು ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ, ರಾಷ್ಟ್ರಧ್ವಜದ ಮಧ್ಯೆ ಇರುವ ಅಶೋಕ ಚಕ್ರದಲ್ಲಿನ ನೀಲಿ ಬಣ್ಣವನ್ನು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಆಟಗಾರರ ಡ್ರೆಸ್ ಗೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ನೀಲಿ ಬಣ್ಣದ ಡ್ರೆಸ್ ಕಾಲ ಬದಲಾದಂತೆ ತೆಳು ನೀಲಿ ನಂತರ ಗಾಢ ನೀಲಿಯಾಗಿ ಮಾರ್ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...