alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾರಥಾನ್ ಜಾಹೀರಾತಿನಲ್ಲಿ ಮಾಡೆಲ್ ಚಪ್ಪಲಿ ಮೇಲೆ ಎಲ್ಲರ ಕಣ್ಣು, ಕಾರಣ?

ಮುಂಬೈನಲ್ಲಿ ನಡೆಯಲಿರುವ ಮ್ಯಾರಥಾನ್ ಒಂದರ ಪೋಸ್ಟರ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವಾಣಿಜ್ಯ ನಗರಿಯಲ್ಲಿ ಫಿಟ್ನೆಸ್ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿರಬಹುದು ಎಂದುಕೊಳ್ಬೇಡಿ. ಯಾಕಂದ್ರೆ ಎಲ್ಲರನ್ನು ಸೆಳೆಯುತ್ತಿರೋದು ಈ ಪೋಸ್ಟರ್ ನಲ್ಲಿರೋ ಯುವತಿ.

ಸ್ಪೇನ್ ನ ರೂಪದರ್ಶಿ ಎಲ್ಸಾ ಪಟಕಿ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ. ಸುಂದರವಾದ ಚಪ್ಪಲಿ ತೊಟ್ಟು ಪೋಸ್ ಕೊಟ್ಟಿದ್ದಾಳೆ. ಸ್ಪೋರ್ಟ್ಸ್ ಈವೆಂಟ್ ಅಂದ್ಮೇಲೆ ಬೂಟು ಅಥವಾ ಫಿಟ್ನೆಸ್ ಪಾದರಕ್ಷೆಗಳನ್ನು ತೊಡಬೇಕು. ಆದ್ರೆ ಎಲ್ಸಾ ಯಾಕೆ ಬಣ್ಣಬಣ್ಣದ ಸ್ಯಾಂಡಲ್ ತೊಟ್ಟಿದ್ದಾಳೆ ಅನ್ನೋದು ಎಲ್ಲರ ಪ್ರಶ್ನೆ.

ಕಾಮಿಡಿಯನ್ ರಾಹುಲ್ ಸುಬ್ರಮಣ್ಯನ್ ಶೇರ್ ಮಾಡಿರೋ ಈ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವರಿ 7ರಂದು ನಡೆಯಲಿರೋ ಮ್ಯಾರಥಾನ್ ಗೂ, ರೂಪದರ್ಶಿ ಧರಿಸಿರುವ ಚಪ್ಪಲಿಗೂ ಯಾವುದೇ ಸಂಬಂಧವಿಲ್ಲ ಅನ್ನೋದು ಬಹುತೇಕರ ಅಭಿಪ್ರಾಯ.

ಆದ್ರೆ ಎಲ್ಸಾ ಹಾಕೊಂಡಿರೋದು Guissepo ಚಪ್ಪಲಿಯನ್ನು. ಎಲ್ಸಾ ಈ ಕಂಪನಿಯ ಬ್ರಾಂಡ್ ಅಂಬಾಸಿಡರ್. ಜೊತೆಗೆ ಸಂಸ್ಥೆ ಮ್ಯಾರಥಾನ್ ನ ಪ್ರಾಯೋಜಕತ್ವ ವಹಿಸಿರೋದ್ರಿಂದ ಶೂ ಬದಲು ಆ ಬ್ರಾಂಡ್ ನ ಚಪ್ಪಲಿ ಹಾಕಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...