alex Certify
ಕನ್ನಡ ದುನಿಯಾ       Mobile App
       

Kannada Duniya

6 ಪ್ಯಾಕ್ ಗಾಗಿ ಉದ್ಯೋಗವನ್ನೇ ಬಿಟ್ಟ ಮಹಿಳಾ ಟೆಕ್ಕಿ

25ರ ಹರೆಯದ ಪ್ರಿಯಾಂಕ ವೈಶ್ಯ ಸಾಫ್ಟ್ ವೇರ್ ಎಂಜಿನಿಯರ್. ಆದ್ರೆ ಡಂಬೆಲ್ಸ್ ಮೋಹ ಅವಳನ್ನು ಕಂಪ್ಯೂಟರ್ ನಿಂದ ದೂರ ಮಾಡಿದೆ. ಭೋಪಾಲ್ ನ ಪ್ರಿಯಾಂಕ ಎರಡನೇ ಬಾರಿಗೆ ಸ್ಟ್ರಾಂಗ್ಮನ್ ಆಫ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದಾಳೆ.

ಮುಂಬೈನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಪ್ರಿಯಾಂಕಾ ಕೆಲಸ ಮಾಡುತ್ತಿದ್ಲು. ಆಕೆಯ ಸಹೋದ್ಯೋಗಿಗಳೆಲ್ಲ ಬೆಂಗಳೂರಿಗೆ ಶಿಫ್ಟ್ ಆದ್ರೆ, ಪ್ರಿಯಾಂಕಾ ಬೈಸಿಪ್ಸ್ ಹಾಗೂ ಆ್ಯಬ್ಸ್ ಬಿಲ್ಡ್ ಮಾಡಲು ನಿರ್ಧರಿಸಿದ್ಲು.

ಸಹೋದ್ಯೋಗಿಗಳೆಲ್ಲ ಆರಂಕಿ ಸಂಬಳ ಪಡೆಯುತ್ತಿದ್ದಾರೆ, ಆದ್ರೆ ಸಿಕ್ಸ್ ಪ್ಯಾಕ್ ಇರೋದು ಪ್ರಿಯಾಂಕಾ ಬಳಿ ಮಾತ್ರ ಅಂತಾನೇ ಎಲ್ಲರೂ ತಮಾಷೆ ಸಹ ಮಾಡ್ತಾರೆ. ಹೊಸತೇನನ್ನಾದ್ರೂ ಮಾಡಬೇಕು ಅನ್ನೋ ತುಡಿತ ಪ್ರಿಯಾಂಕಾಗೆ ಮೊದಲಿನಿಂದ್ಲೂ ಇತ್ತು.

ಹತ್ತಾರು ಬಾಡಿ ಬಿಲ್ಡಿಂಗ್ ಪ್ರಶಸ್ತಿ ಗೆದ್ದಿರೋ ಕೋಚ್ ಪ್ರಮೋದ್ ಭಾಟಿ, ಆಕೆಯ ಕನಸನ್ನು ನನಸಾಗಿಸಲು ಸಹಕಾರ ನೀಡಿದ್ದಾರೆ. ಸದ್ಯ ಭೋಜ್ಪುರ್ ಕ್ಲಬ್ ನಲ್ಲಿ ಪ್ರಿಯಾಂಕಾ ಟ್ರೈನರ್ ಆಗಿದ್ದಾಳೆ. ಬೈಸಿಪ್ಸ್, ಆ್ಯಬ್ಸ್ ಬಿಲ್ಡ್ ಮಾಡಲು ಪ್ರಿಯಾಂಕಾ 3 ವರ್ಷ ಬೆವರು ಹರಿಸಿದ್ದಾಳೆ.

ಸಾಮಾನ್ಯವಾಗಿ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು. ಮಹಿಳೆಯರು ಇದನ್ನು ಆಯ್ಕೆ ಮಾಡಿಕೊಳ್ಳೋದು ವಿರಳ, ಅವರಿಗೆ ಅವಕಾಶಗಳೂ ಕಡಿಮೆ. ಆದ್ರೂ ಹಿಂಜರಿಯದೆ ಪ್ರಿಯಾಂಕಾ ಎಂಜಿನಿಯರಿಂಗ್ ಕೆಲಸ ಬಿಟ್ಟು ಇದರಲ್ಲಿ ಯಶಸ್ವಿಯಾಗಿದ್ದಾಳೆ.

120 ಕೆಜಿ ಭಾರವನ್ನು ಹೊರಬಲ್ಲ ಸಾಮರ್ಥ್ಯ ಅವಳಿಗಿದೆ. 40 ಕೆಜಿ ಕಲ್ಲನ್ನು ಕೈಗಳ ಮೇಲೆ ಹೊರುತ್ತಾಳೆ. ಸದ್ಯ ವಿಶ್ವದ ಬೆಸ್ಟ್ ಬಾಡಿ ಬಿಲ್ಡರ್ ಗಳಲ್ಲಿ ಪ್ರಿಯಾಂಕಾಗೆ 44ನೇ ಸ್ಥಾನ. ಟಾಪ್ 30ಯಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...