alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬ್ಳೆ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು

kumble_1112ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ, ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದ್ದು, ಕುಂಬ್ಳೆಯವರ ನೇತೃತ್ವದಲ್ಲಿ ಟೀಮ್ ಇಂಡಿಯಾ ಮತ್ತಷ್ಟು ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗಿದೆ. ಅಜಾತ ಶತ್ರುವಾಗಿರುವ ಕುಂಬ್ಳೆಯವರ ಕುರಿತಾದ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ.

ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಮೆಕಾನಿಕಲ್ ಪದವಿ ಪಡೆದಿರುವ ಅನಿಲ್ ಕುಂಬ್ಳೆಯವರು 1990 ರಿಂದ 2008 ರವರೆಗೆ 469 ಪಂದ್ಯಗಳನ್ನಾಡಿದ್ದಾರೆ. ಒಟ್ಟು 619 ವಿಕೆಟ್ ಗಳಿಸಿರುವ ಅನಿಲ್ ಕುಂಬ್ಳೆ, ಅತ್ಯಧಿಕ ವಿಕೆಟ್ ಗಳಿಸಿರುವವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 1999 ರಲ್ಲಿ ನಡೆದ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಕೇವಲ 74 ರನ್ ಗಳಿಗೆ 10 ವಿಕೆಟ್ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ.

2007 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಕುಂಬ್ಳೆ, ಔಟಾಗದೆ 110 ರನ್ ಗಳಿಸುವ ಮೂಲಕ ತಾವು ಬ್ಯಾಟಿಂಗ್ ನಲ್ಲೂ ಕಮ್ಮಿಯಿಲ್ಲವೆಂಬುದನ್ನು ನಿರೂಪಿಸಿದ್ದಾರೆ. 1993 ರ ಹಿರೋ ಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಪಂದ್ಯದಲ್ಲಿ ಕುಂಬ್ಳೆ 12 ರನ್ ನೀಡಿ 6 ವಿಕೆಟ್ ಗಳನ್ನು ಕಬಳಿಸಿದ್ದು, ಸತತ 21 ವರ್ಷಗಳ ಕಾಲ ಈ ದಾಖಲೆ ಇವರ ಹೆಸರಿನಲ್ಲಿಯೇ ಇತ್ತು. ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ 2013 ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿದ್ದ ಅನಿಲ್ ಕುಂಬ್ಳೆ, ಬಳಿಕ ನವೆಂಬರ್ 2015 ರ ವರೆಗೆ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...