alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾದಲ್ಲಿ ಪೃಥ್ವಿಗೆ ಸಿಗುತ್ತಾ ಸ್ಥಾನ…?

ಐಸಿಸಿ ಅಂಡರ್ – 19 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿರೋ ಭಾರತ ತಂಡವನ್ನು ಮುನ್ನಡೆಸಿರುವ ಪೃಥ್ವಿ ಶಾ, ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನೂ ನೀಡಿದ್ದಾರೆ. 6 ಪಂದ್ಯಗಳಿಂದ 261 ರನ್ ಗಳಿಸಿದ್ದರು.

18ರ ಹರೆಯದ ಪೃಥ್ವಿ ಟೀಂ ಇಂಡಿಯಾಕ್ಕೆ ಸೇರುವ ಎಲ್ಲಾ ಸಾಧ್ಯತೆಗಳೂ ಇವೆ. ಮಗುವಾಗಿದ್ದಾಗ್ಲೇ ಪೃಥ್ವಿ ತಾಯಿಯನ್ನು ಕಳೆದುಕೊಂಡಿದ್ರು. 8 ವರ್ಷದವರಿದ್ದಾಗ ಪೃಥ್ವಿ, ರಾಜು ಪಾಠಕ್ ಅವರ  ಬಳಿ ತರಬೇತಿಗಾಗಿ ತಂದೆಯೊಡನೆ ಬಂದಿದ್ರು.

ವಯಸ್ಸು ಚಿಕ್ಕದು ಅನ್ನೋ ಕಾರಣಕ್ಕೆ ಪೃಥ್ವಿಯನ್ನು ರಾಜು ಪಾಠಕ್ ಮಕ್ಕಳ ನೆಟ್ಸ್ ಗೆ ಕಳಿಸಿದ್ದರು. ನಾಲ್ಕು ಬಾಲ್ ಆಗ್ತಿದ್ದಂತೆ ಪೃಥ್ವಿಯ ಆಟ ನೋಡಿ ಬೆರಗಾದ ರಾಜು ಪಾಠಕ್, ಸೀನಿಯರ್ ಸ್ಕೂಲ್ ಟ್ರೇನಿಂಗ್ ಸೆಕ್ಷನ್ ಗೆ ಕರೆತಂದ್ರು.

ಬೆಳಗ್ಗೆ 3.30ಕ್ಕೆ ಎದ್ದು, ರೈಲು ಏರಿ ಬಾಂದ್ರಾಕ್ಕೆ ಬರ್ತಿದ್ದ ಪೃಥ್ವಿ ಮನಸ್ಸಿಟ್ಟು ಅಭ್ಯಾಸ ಮಾಡುತ್ತಿದ್ರು. ಇಂಟರ್ ಸ್ಕೂಲ್ ಟೂರ್ನಿಗಳಲ್ಲೂ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ರು ಪೃಥ್ವಿ. 2012ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಚೀಡಲ್ ಹಲ್ಮೆ ಸ್ಕೂಲ್ ಟೂರ್ನಿಯಲ್ಲಿ 1446 ರನ್ ಬಾರಿಸಿದ್ದರು.

330 ಬಾಲ್ ಗಳಲ್ಲಿ 546 ರನ್ ಸಿಡಿಸುವ ಮೂಲಕ ಮತ್ತೊಮ್ಮೆ ಗಮನಸೆಳೆದಿದ್ದರು. ಸಿಸಿಐನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದ ಪೃಥ್ವಿ, ಸಚಿನ್ ದಾಖಲೆಯನ್ನು ಮುರಿದಿದ್ದರು. ಮುಂಬೈ ಸೆಮಿಫೈನಲ್ ಪಂದ್ಯದಲ್ಲಿ ಆಡುವ ಮೂಲಕ ರಣಜಿಗೆ ಪದಾರ್ಪಣೆ ಮಾಡಿದ್ದರು.

ಆ ಪಂದ್ಯದಲ್ಲಿ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು. ದುಲೀಪ್ ಟ್ರೋಫಿಯಲ್ಲಾಡಿದ ಚೊಚ್ಚಲ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ಫಿಟ್ನೆಸ್, ಫೀಲ್ಡಿಂಗ್, ಬ್ಯಾಟಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡಿರೋ ಪೃಥ್ವಿ ಸದ್ಯದಲ್ಲೇ ಟೀಂ ಇಂಡಿಯಾ ಸೇರೋದಂತೂ ಖಚಿತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...