alex Certify
ಕನ್ನಡ ದುನಿಯಾ       Mobile App
       

Kannada Duniya

ಓವರ್ ನಲ್ಲಿ 12 ರನ್ ನೀಡುವಂತೆ ಬೌಲರ್ ಗೆ ಆಫರ್ ಮಾಡಿದ್ದನಂತೆ ಪಾಕ್ ಕ್ರಿಕೆಟರ್

ಪಾಕ್ತಿಸಾನದ ಸ್ಪಿನ್ ಬೌಲರ್ ಡ್ಯಾನಿಶ್ ಕನೇರಿಯಾ ಮೇಲೆ ಇದೀಗ ಸ್ಪಾಟ್ ಫಿಕ್ಸಿಂಗ್ ಆರೋಪದ ಕೊಳೆ ಮೆತ್ತಿಕೊಂಡಿದೆ. 2009 ರಲ್ಲಿ ತನ್ನೊಂದಿಗೆ ಎಸ್ಸೆಕ್ಸ್ ಕೌಂಟಿ ತಂಡದಲ್ಲಿ ಡ್ಯಾನಿಶ್ ಕನೇರಿಯಾ ಜೊತೆ ಆಡಿದ್ದ ಮರ್ವಿನ್ ವೆಸ್ಟ್ ಫೀಲ್ಡ್ ಎಂಬ ಆಟಗಾರನೊಬ್ಬ ಡ್ಯಾನಿಶ್ ಮೇಲೆ ಇಂತಹ ಆರೋಪ ಮಾಡಿದ್ದಾನೆ.

ಪ್ರೋ40 ಪಂದ್ಯವೊಂದರಲ್ಲಿ ಓವರ್ ನಲ್ಲಿ 12 ರನ್ ಬಿಟ್ಟುಕೊಡಲು ಪಾಕ್ ಬೌಲರ್ ನನಗೆ 6 ಸಾವಿರ ಪೌಂಡ್ ಆಫರ್ ಮಾಡಿದ್ದ ಎಂದು ತಿಳಿಸಿದ್ದಾನೆ. ಮರ್ಲಿನ್ ವೆಸ್ಟ್ ಫೀಲ್ಡ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 2013 ರಲ್ಲಿ ಜೈಲು ಪಾಲಾಗಿದ್ದ. ಆತ ತಿಳಿಸಿರುವ ಪ್ರಕಾರ ಡ್ಯಾನಿಶ್ ಬುಕ್ಕಿಗಳನ್ನು ಪರಿಚಯಿಸಿದ್ದನಂತೆ.

ಒಂದು ದಿನ ಹಣ ಸಂಪಾದನೆ ವಿಚಾರ ಮಾತಿನ ನಡುವೆ ಬಂದಾಗ ಡ್ಯಾನಿಶ್ ನನಗೆ ಗಾಳ ಹಾಕಿದ ಎಂದು ಮರ್ಲಿನ್ ಹೇಳಿದ್ದಾನೆ. ಕ್ರಿಕೆಟ್ ನಲ್ಲಿ ಯುವಕರಿಗೆ ಹಣ ಮಾಡುವುದು ಸ್ವಲ್ಪ ಕಷ್ಟ. ಸಮಯ ತೆಗೆದುಕೊಳ್ಳುತ್ತದೆ. ಆದರೆ ಅತ್ಯಂತ ತ್ವರಿತವಾಗಿ ಹಣ ಮಾಡುವ ವಿಧಾನ ನನಗೆ ಗೊತ್ತು ಎಂದು ಹೇಳಿ ಅನು ಬಟ್ ಎಂಬ ಉದ್ಯಮಿಯೊಬ್ಬನನ್ನು ಪರಿಯಚಯಿಸಿದ್ದ. ನಾನಾಗ ಪೂರ್ತಿ ಕನ್ ಫ್ಯೂಸ್ ಆಗಿದ್ದೆ ಎಂದು ತಿಳಿಸಿದ್ದಾನೆ.

ಈಗ ಪಾಕಿಸ್ತಾನ ತಂಡವೂ ಮರೆತೇ ಬಿಟ್ಟಿರುವ ಡ್ಯಾನಿಶ್ ಕನೇರಿಯಾನನ್ನು ಕ್ರಿಕೆಟ್ ಜಗತ್ತು ಇದೀಗ ಮತ್ತೆ ನೆನಪಿಸಿಕೊಳ್ಳುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...