alex Certify ಹುಟ್ಟುಹಬ್ಬದ ಪ್ಲಾನ್ ಬಗ್ಗೆ ಕೇಳಿದ್ದಕ್ಕೆ ಭಾವುಕರಾದ ದಿ ಗ್ರೇಟ್ ಖಲಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಪ್ಲಾನ್ ಬಗ್ಗೆ ಕೇಳಿದ್ದಕ್ಕೆ ಭಾವುಕರಾದ ದಿ ಗ್ರೇಟ್ ಖಲಿ…..!

ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೆ, ಮಾಜಿ ಡಬ್ಲ್ಯೂಡಬ್ಲ್ಯೂಇ ಕುಸ್ತಿಪಟು ದಿ ಗ್ರೇಟ್ ಖಲಿಯ ವಿವಿಧ ತಮಾಷೆಯ ಮೇಮ್‌ಗಳನ್ನು ನೀವು ಬಹುಶಃ ನೋಡಿರುತ್ತೀರಿ.

ಇತ್ತೀಚಿನ ವಿಡಿಯೋದಲ್ಲಿ, ಖಲಿಯನ್ನು ವ್ಯಕ್ತಿಯೊಬ್ಬರು ತಮ್ಮ ಹುಟ್ಟುಹಬ್ಬದ ಯೋಜನೆಗಳ ಬಗ್ಗೆ ಪ್ರಶ್ನಿಸಿದಾಗ ಅವರು ಅಳುತ್ತಿರುವ ದೃಶ್ಯ ಕಂಡುಬಂದಿದೆ. ಖಲಿಯ ಅಳುವಿಗೆ ಕಾರಣವೇನು ಎಂಬುದು ತಿಳಿದಿಲ್ಲವಾದ್ರೂ, ನೆಟ್ಟಿಗರು ಮಾತ್ರ ಮೀಮ್ ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಭಯಾನಿ ಎಂಬುವವರು ಹಂಚಿಕೊಂಡಿದ್ದಾರೆ. ಕ್ಯಾಮರಾದ ಎದುರು ಬಂದ ಖಲಿ ಪತ್ರಕರ್ತ ಕೇಳಿದ ಪ್ರಶ್ನೆಗೆ ಅಳೋದಕ್ಕೆ ಶುರುಮಾಡಿದ್ದಾನೆ. ನೆಟ್ಟಿಗರು ಇದನ್ನು ರಂಜಿಸಿದಂತೆ ಕಂಡುಬಂದಿದ್ದು, ಮೀಮ್ ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಮೈಕ್ರೊ-ಬ್ಲಾಗಿಂಗ್ ಸೈಟ್‌ನಲ್ಲಿ ಮೀಮ್‌ಗಳು ತುಂಬಿದಂತೆ, ಅನೇಕರು ಖಲಿ ಅವರ ಪರಿಸ್ಥಿತಿಯ ಬಗ್ಗೆ ಸಾಕಷ್ಟು ಕಾಳಜಿ ಮತ್ತು ಸಹಾನುಭೂತಿ ಹೊಂದಿದ್ದರು. ಅವರು ಏಕೆ ಭಾವನಾತ್ಮಕ ಕುಸಿತಕ್ಕೆ ಒಳಗಾದ್ರು ಎಂಬ ಬಗ್ಗೆ ಚಿಂತಿತರಾದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...