alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಶೇರ್ ಮಾಡಿದ್ದ ವಿಡಿಯೋದಲ್ಲಿದ್ದ ಮಗು ಯಾರು ಗೊತ್ತಾ?

ಕ್ರಿಕೆಟಿಗ ವಿರಾಟ್ ಕೊಹ್ಲಿ, ಶಿಖರ್ ಧವನ್, ರಾಬಿನ್ ಉತ್ತಪ್ಪ ಹಾಗೂ ಯುವರಾಜ್ ಸಿಂಗ್ ಪುಟ್ಟ ಬಾಲಕಿಯ ವಿಡಿಯೋ ಒಂದನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದರು. ಮಕ್ಕಳಿಗೆ ಈ ರೀತಿ ಹಿಂಸೆ ಕೊಡದಂತೆ ಪೋಷಕರಲ್ಲಿ ಮನವಿ ಮಾಡಿದ್ರು. ಅಷ್ಟಕ್ಕೂ ಆ ವೈರಲ್ ವಿಡಿಯೋದಲ್ಲಿರುವ ಪುಟಾಣಿ ಹಯಾ ಯಾರು ಗೊತ್ತಾ?

ಬಾಲಿವುಡ್ ಗಾಯಕರಾದ ತೋಶಿ ಮತ್ತು ಶರೀಬ್ ಸಬ್ರಿ ಅವರ ಸೋದರ ಸೊಸೆ. ಮಗುವಿಗೆ ಈ ರೀತಿ ಹಿಂಸೆ ಕೊಟ್ಟಿದ್ದು ತಪ್ಪಲ್ವಾ ಅಂತ ಕೇಳಿದ್ರೆ ತೋಶಿ ದೊಡ್ಡ ಭಾಷಣವನ್ನೇ ಮಾಡ್ತಾರೆ. ಕೊಹ್ಲಿ ಹಾಗೂ ಧವನ್ ಗೆ ನಮ್ಮ ಮಗುವಿನ ಬಗ್ಗೆ ಏನ್ ಗೊತ್ತು? ಮಗು ಅಳ್ತಿದೆ ಅಂತಾ ಓದಿಸದೇ ಬಿಟ್ರೆ ಆಕೆ ಅನಕ್ಷರಸ್ಥಳಾಗ್ತಾಳೆ.

ಬೈದ ತಕ್ಷಣ ಹಯಾ ಅಳ್ತಾಳೆ ನಿಜ, ಆದ್ರೆ ಮರುಕ್ಷಣವೇ ಆಡಲು ಓಡ್ತಾಳೆ. ಅವಳ ಸ್ವಭಾವವೇ ಹಾಗೆ ಅಂತಾ ಸಮರ್ಥಿಸಿಕೊಂಡಿದ್ದಾರೆ. ಹಯಾ ಎಷ್ಟು ಹಠಮಾರಿಯಾಗಿದ್ದಾಳೆ ಅನ್ನೋದನ್ನು ಪತಿಗೆ ತೋರಿಸಲು ಅವಳ ಅಮ್ಮ ಆ ವಿಡಿಯೋ ಮಾಡಿದ್ದಳಂತೆ. ಅದು ವೈರಲ್ ಆಗಬಾರದಿತ್ತು ಎನ್ನುತ್ತಾರೆ ತೋಶಿ.

ಕೇವಲ ಒಂದೂವರೆ ನಿಮಿಷದ ವಿಡಿಯೋ ನೋಡಿ ತೀರ್ಮಾನಕ್ಕೆ ಬರಬಾರದು. ಮಗಳ ಒಳಿತಿಗಾಗಿ ತಾಯಿ ಬೈದಿದ್ದಾಳೆ ಅಷ್ಟೆ. ಮಕ್ಕಳನ್ನು ಬೆಳೆಸೋದು ಸುಲಭದ ಕೆಲಸವಲ್ಲ. ಹಠ ಮಾಡ್ತಾಳೆ ಅಂತಾ ಓದು ಬರಹ ಮಾಡಿಸದೇ ಇರೋದು ಅಸಾಧ್ಯ ಅಂತೆಲ್ಲಾ ಸಮರ್ಥಿಸಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...