alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾರವಿಲ್ಲದೆ ಗುಹೆಯಲ್ಲಿ ಬಾಲಕರು 9 ದಿನ ಕಳೆದಿದ್ದು ಹೇಗೆ ಗೊತ್ತಾ?

ಥೈಲ್ಯಾಂಡ್ ಗುಹೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿ ಕೊನೆಗೂ ಜಯಶಾಲಿಯಾಗಿ ಬಂದ ಫುಟ್ಬಾಲ್ ಆಟಗಾರರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತರಬೇತುದಾರ ಸೇರಿದಂತೆ 12 ಫುಟ್ಬಾಲ್ ಆಟಗಾರರನ್ನು ಗುಹೆಯಿಂದ ಸುರಕ್ಷಿತವಾಗಿ ಕರೆತರಲು ಅಂತರಾಷ್ಟ್ರೀಯ ತಂಡ ಯಶಸ್ವಿಯಾಗಿತ್ತು. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಬಾಲಕರು ಈಗ ಮನೆಗೆ ತೆರಳಿದ್ದಾರೆ.

ತರಬೇತುದಾರ ಹಾಗೂ ಫುಟ್ಬಾಲ್ ಆಟಗಾರರು ಇದೇ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿ ಆ ಕರಾಳ ದಿನಗಳನ್ನು ಮೆಲುಕು ಹಾಕಿದ್ರು. ಗುಹೆಯಲ್ಲಿ 9 ದಿನ ಆಹಾರವಿಲ್ಲದೆ ಕಳೆಯೋದು ಚಮತ್ಕಾರದ ವಿಚಾರ. ಗುಹೆಯಲ್ಲಿ ಸಿಕ್ಕ ನೀರನ್ನು ಕುಡಿದು ಮಕ್ಕಳು ಹೊಟ್ಟೆ ತುಂಬಿಸಿಕೊಂಡಿದ್ದರಂತೆ. ಒಬ್ಬರನ್ನೊಬ್ಬರು ಅಂಟಿ ಕುಳಿತು ದಿನ ಕಳೆಯುತ್ತಿದ್ದರಂತೆ.

ರಕ್ಷಣೆಗೆ ಬಂದ ವ್ಯಕ್ತಿಗಳ ಇಂಗ್ಲೀಷ್ ಕೇಳಿ ಇಂಗ್ಲೆಂಡ್ ಗೆ ಬಂದಿದ್ದೇವೆ ಎಂದುಕೊಂಡಿದ್ದರಂತೆ. ಹಸಿವಾದ್ರೆ ಏನು ಮಾಡ್ತಿದ್ರಿ ಎನ್ನುವ ಪ್ರಶ್ನೆಗೆ ಚಿಕ್ಕ ಬಾಲಕನೊಬ್ಬ ಉತ್ತರ ನೀಡಿದ್ದಾನೆ. ಹಸಿವಾದ್ರೆ ಫ್ರೈಡ್ ರೈಸ್ ತಿನ್ನುವ ಕನಸು ಕಾಣ್ತಿದ್ದೆ ಎಂದಿದ್ದಾನೆ. ಮನೆಗೆ ಹೋದ್ಮೇಲೆ ಅಮ್ಮ ಹೊಡಿತಾಳೆ ಎಂಬ ಭಯ ಗುಹೆಯಲ್ಲಿರುವ ಬಾಲಕನೊಬ್ಬನಿಗೆ ಕಾಡಿತ್ತಂತೆ.

ನಮ್ಮ ಸಾವಿಗೆ ನಾವೇ ಹೊಣೆ ಎಂದುಕೊಂಡಿದ್ದ ಮಕ್ಕಳು ಹೋಂ ವರ್ಕ್ ಬಗ್ಗೆಯೂ ಚಿಂತೆಗೊಳಗಾಗಿದ್ದರಂತೆ. ಮಕ್ಕಳ ಹಸಿವು ಮರೆಸಲು ಕೋಚ್ ಮಕ್ಕಳಿಗೆ ಗುಹೆ ಕೊರೆಯುವಂತೆ ಸಲಹೆ ನೀಡಿದ್ದರಂತೆ. ತಪ್ಪಿಗೆ ಕ್ಷಮೆ ಕೇಳಿರುವ ಮಕ್ಕಳು, ಮುಂದೆ ಸೇನೆ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಗೂ ಮುನ್ನ ಮೈದಾನದಲ್ಲಿ ಫುಟ್ಬಾಲ್ ಆಡಿದ ಮಕ್ಕಳು ನಂತ್ರ ಪತ್ರಕರ್ತರ ಮುಂದೆ ಬಂದ್ರು. ಆದ್ರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಶ್ನೆಗಳಿಗೆ ನಿರ್ಬಂಧ ಹೇರಲಾಗಿತ್ತು. ಮೊದಲೇ ಪ್ರಶ್ನೆ ಸಿದ್ಧಪಡಿಸಿ ಅದನ್ನು ಮಾನಸಿಕ ತಜ್ಞರಿಗೆ ನೀಡಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಕ್ಕಳಿಗೆ ಹೆಚ್ಚು ಪ್ರಶ್ನೆ ಕೇಳಲಿಲ್ಲ. ರಕ್ಷಣಾ ತಂಡ ತಮ್ಮ ಅನುಭವವನ್ನು ಹಂಚಿಕೊಂಡಿತು.

ಇನ್ನೊಂದು ತಿಂಗಳು ಮಕ್ಕಳಿಗೆ ವಿಶ್ರಾಂತಿಯ ಅಗತ್ಯವಿದೆಯಂತೆ. 10-15 ದಿನ ಯಾವುದೇ ಪತ್ರಕರ್ತರ ಸಂಪರ್ಕಕ್ಕೆ ಮಕ್ಕಳು ಬರುವುದು ಬೇಡವೆಂದು ವೈದ್ಯರು ಹೇಳಿದ್ದಾರೆ. ಆ 9 ದಿನ ಹೇಗಿತ್ತು ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡ್ತಿದೆ. ಹಾಲಿವುಡ್, ಚಿತ್ರ ನಿರ್ಮಾಣದ ಆಸಕ್ತಿ ತೋರುತ್ತಿದೆ. ಆದ್ರೆ ವಿಸ್ತಾರವಾಗಿ ಅಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ಮಕ್ಕಳು ವಿವರಿಸಲು ಇನ್ನಷ್ಟು ದಿನ ಕಾಯಲೇಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...