alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಮೆ ಕೋರಿ ಪತ್ರ ಬರೆದಿದ್ದಾರೆ ಗುಹೆಯಲ್ಲಿ ಸಿಕ್ಕಿಬಿದ್ದ ತರಬೇತುದಾರ

ಥೈಲ್ಯಾಂಡ್ ಗುಹೆಯಲ್ಲಿ 12 ಮಕ್ಕಳ ಜೊತೆ ಸಿಕ್ಕಿಬಿದ್ದಿರುವ ಫುಟ್ಬಾಲ್ ತರಬೇತುದಾರ ಹೆತ್ತವರ ಕ್ಷಮೆ ಕೋರಿದ್ದಾರೆ. ತರಬೇತುದಾರ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರವನ್ನು ಶನಿವಾರ ಥಾಯ್ ನೌಕಾಪಡೆ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಿದೆ.

ಪತ್ರದಲ್ಲಿ ತರಬೇತುದಾರ ಎಲ್ಲ ಮಕ್ಕಳೂ ಸುರಕ್ಷಿತವಾಗಿದ್ದಾರೆ. ನಾನು ಎಲ್ಲ ಮಕ್ಕಳ ಕಾಳಜಿ ವಹಿಸ್ತೇನೆಂದು ನಿಮಗೆ ಪ್ರಮಾಣ ಮಾಡ್ತೇನೆ. ಎಲ್ಲರ ಬೆಂಬಲಕ್ಕೆ ಧನ್ಯವಾದ ಹೇಳುತ್ತೇನೆ. ಮಕ್ಕಳ ಪೋಷಕರ ಕ್ಷಮೆ ಕೋರುತ್ತೇನೆಂದು ಪತ್ರದಲ್ಲಿ ಬರೆದಿದ್ದಾರೆ. ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ.ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ಫುಟ್ಬಾಲ್ ತರಬೇತುದಾರ 25 ವರ್ಷದ ಇಕ್ಕಪೊಲಾ 11ರಿಂದ 16 ವರ್ಷದ 12 ಮಕ್ಕಳ ಜೊತೆ ಗುಹೆಗೆ ಹೋಗಿದ್ದರು. 14 ದಿನಗಳಿಂದ ಗುಹೆಯಲ್ಲಿ ಸಿಕ್ಕಿಬಿದ್ದಿದ್ದು, ಅವ್ರನ್ನು ಸುರಕ್ಷಿತವಾಗಿ ಹೊರ ತರುವ ಪ್ರಯತ್ನ ನಡೆಯುತ್ತಿದೆ. ಮಳೆ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗ್ತಿದೆ. ಜೊತೆಗೆ ಸಿಲಿಂಡರ್ ಕೊರತೆ ಎದುರಾಗಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...