alex Certify
ಕನ್ನಡ ದುನಿಯಾ       Mobile App
       

Kannada Duniya

ಗುಹೆಯಲ್ಲಿರುವ ಐದು ಫುಟ್ಬಾಲ್ ಆಟಗಾರರ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ಥೈಲ್ಯಾಂಡ್ ಗುಹೆಯಲ್ಲಿ ಸಿಕ್ಕಿಬಿದ್ದ 12 ಫುಟ್ಬಾಲ್ ಆಟಗಾರರ ಪೈಕಿ 8 ಆಟಗಾರರನ್ನು ರಕ್ಷಣಾ ಪಡೆ ಸುರಕ್ಷಿತವಾಗಿ ಹೊರಗೆ ಕರೆ ತಂದಿದೆ. ಮಂಗಳವಾರ ಕಾರ್ಯಾಚರಣೆ ಮತ್ತೆ ಶುರುವಾಗಿದೆ. ಗುಹೆಯಲ್ಲಿರುವ ಕೋಚ್ ಸೇರಿ 5 ಮಂದಿಯನ್ನು ಸುರಕ್ಷಿತವಾಗಿ ಹೊರ ತರುವ ಯತ್ನ ಮುಂದುವರೆದಿದೆ.

ಭಾರೀ ಮಳೆಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಮಂಗಳವಾರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದ ಕಾರಣ ರಕ್ಷಣಾ ಕಾರ್ಯ ಶುರುವಾಗಿದೆ. ಜೂನ್ 23ರಂದು ಗುಹೆಗೆ ಹೋಗಿದ್ದ ಫುಟ್ಬಾಲ್ ಆಟಗಾರರು ಮಳೆಯಿಂದಾಗಿ ಅಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಕಳೆದ 2 ವಾರಗಳಿಂದ ಗುಹೆಯಲ್ಲಿದ್ದ ಮಕ್ಕಳ ರಕ್ಷಣೆ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು.

ಭಾನುವಾರ ನಾಲ್ಕು ಮಕ್ಕಳನ್ನು ಸುರಕ್ಷಿತವಾಗಿ ಹೊರ ತರಲಾಗಿತ್ತು. ಸೋಮವಾರ ಮತ್ತೆ ನಾಲ್ವರು ಮಕ್ಕಳನ್ನು ಹೊರಗೆ ತರಲಾಗಿದೆ. ಗುಹೆಯಿಂದ ಹೊರಗೆ ಬಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...