alex Certify
ಕನ್ನಡ ದುನಿಯಾ       Mobile App
       

Kannada Duniya

ಗುಹೆಯಿಂದ ಹೊರಬಂದ ಕೋಚ್ ಕಂಡು ಕಣ್ಣೀರಿಟ್ಟ ಆತ್ಮೀಯ

ಕಳೆದ 18 ದಿನಗಳಿಂದ ಥಾಯ್ಲೆಂಡ್ ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಲುಕಿಕೊಂಡಿದ್ದ 12 ಮಂದಿ 11-16 ವರ್ಷದೊಳಗಿನ ಫುಟ್ಬಾಲ್ ಆಟಗಾರರು ಹಾಗೂ 25 ವರ್ಷದ ಕೋಚ್ ರನ್ನು ಸುರಕ್ಷಿತವಾಗಿ ಹೊರತರಲಾಗಿದೆ.

ಇಡೀ ವಿಶ್ವದ ಗಮನ ಸೆಳೆದಿದ್ದ ಈ ಪ್ರಕರಣ ಸುಖಾಂತ್ಯ ಕಂಡಿರುವುದು ಎಲ್ಲರಲ್ಲೂ ಹರ್ಷ ಮೂಡಿಸಿದೆ. ರಕ್ಷಣೆಗೆ ಒಳಗಾದವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪರಿಶೀಲಿಸಲಾಗುತ್ತಿದೆ.

12 ಮಂದಿ ಬಾಲಕರ ಫುಟ್ಬಾಲ್ ಕೋಚ್ ಚಂಟಾವೊಂಗ್ ಅವರನ್ನು ಎಲ್ಲರೂ ಶ್ಲಾಘಿಸಿದ್ದು, ಅವರಿಂದಲೇ ಬಾಲಕರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದಿದ್ದರು ಎಂದು ಹೇಳಲಾಗುತ್ತಿದೆ.

ಕಡೆಯದಾಗಿ ಚಂಟಾವೊಂಗ್ ಗುಹೆಯಿಂದ ಹೊರಬರುತ್ತಿದ್ದಂತೆ ಅವರನ್ನು ಕಂಡು ಕಣ್ಣೀರಿಟ್ಟಿರುವ ಆತ್ಮೀಯನೊಬ್ಬ, ಆತನೊಬ್ಬ ಅನಾಥ. ತನ್ನೊಂದಿಗಿದ್ದ 12 ಬಾಲಕರ ಜವಾಬ್ದಾರಿಯನ್ನು ಹೊತ್ತಿದ್ದು, ಇದೀಗ ಎಲ್ಲರೂ ಸುರಕ್ಷಿತವಾಗಿ ಹೊರ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...