alex Certify
ಕನ್ನಡ ದುನಿಯಾ       Mobile App
       

Kannada Duniya

ವಿದಾಯದ ಟೆಸ್ಟ್ ನಲ್ಲಿ ಅತಿವೇಗದ ಶತಕಕ್ಕೆ ದಾಖಲೆಗಳೆಲ್ಲಾ ಧೂಳೀಪಟ

brendan

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಬ್ರೆಂಡನ್ ಮೆಕಲಮ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಬಾರಿಸಿದ್ದು, ಹಿಂದಿನ ದಾಖಲೆಗಳನ್ನೆಲ್ಲಾ ಅಳಿಸಿ ಹಾಕಿದ್ದಾರೆ. ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.

ಬ್ರೆಂಡನ್ ಮೆಕಲಮ್ ಅವರ ವೃತ್ತಿ ಜೀವನದ 101 ನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಇದಾಗಿದ್ದು, ಭರ್ಜರಿ, ದಾಖಲೆಯ ಶತಕ ಗಳಿಸುವ ಮೂಲಕ ಕೊನೆಯ ಪಂದ್ಯವನ್ನು ಅವಿಸ್ಮರಣೀಯವಾಗಿಸಿದ್ದಾರೆ. ಕೇವಲ 54 ಎಸೆತಗಳಲ್ಲಿ 4 ಸಿಕ್ಸರ್, 16 ಬೌಂಡರಿ ನೆರವಿನಿಂದ ತಮ್ಮ 12ನೇ ಶತಕ ಗಳಿಸಿದ ಮೆಕಲಮ್ ಔಟಾಗುವಷ್ಟರಲ್ಲಿ 79 ಎಸೆತಗಳಲ್ಲಿ 21 ಬೌಂಡರಿ, 6 ಸಿಕ್ಸರ್ ಸಹಿತ 145 ರನ್ ಪೂರೈಸಿದರು. ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ 1986 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 56 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಪಾಕಿಸ್ತಾನ ಆಟಗಾರ ಮಿಸ್ಬಾ ಉಲ್ ಹಕ್ 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 56 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈಗ ಬ್ರೆಂಡನ್ ಮೆಕಲಮ್ 54 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಕಡಿಮೆ ಎಸೆತಕ್ಕೆ ಶತಕ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...