alex Certify
ಕನ್ನಡ ದುನಿಯಾ       Mobile App
       

Kannada Duniya

ಡೇವಿಸ್ ಕಪ್ ನಲ್ಲಿ ಅಂಪೈರ್ ಕಣ್ಣಿಗೇ ಬಿತ್ತು ಚೆಂಡು

umpire

ಲಂಡನ್ ನಲ್ಲಿ ನಡೆಯುತ್ತಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಅಂಪೈರ್ ಕಣ್ಣಿಗೆ ಚೆಂಡು ತಗುಲಿದೆ. ಗ್ರೇಟ್ ಬ್ರಿಟನ್ ಹಾಗೂ ಕೆನಡಾ ನಡುವೆ ನಡೆಯುತ್ತಿದ್ದ ಪಂದ್ಯ ಅದಾಗಿತ್ತು. ಕೆನಡಾದ ಡೆನಿಸ್ ಶಾಪವಲೋವ್ ಎಂಬಾತ ಹೊಡೆದ ಚೆಂಡು ಅಂಪೈರ್ ಅರ್ನೌಡ್ ಗಬಸ್ ಅವರ ಕಣ್ಣಿಗೆ ತಗುಲಿದೆ.

player

ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಟೆನಿಸ್ ಫೆಡರೇಶನ್ ಡೆನಿಸ್ ನನ್ನು ಅನರ್ಹಗೊಳಿಸಿದ್ದಲ್ಲದೆ ದಂಡ ಕೂಡ ವಿಧಿಸಿದೆ. ಡೆನಿಸ್ ಗೆ 7000 ಡಾಲರ್ ದಂಡ ಹಾಕಲಾಗಿದೆ. ಪಾಯಿಂಟ್ ಕಳೆದುಕೊಳ್ಳುತ್ತಿದ್ದೇನೆಂಬ ಹತಾಶೆಯಲ್ಲಿ ಹೊಡೆದ ಚೆಂಡು ಆಕಸ್ಮಿಕವಾಗಿ ಅಂಪೈರ್ ಗೆ ತಗುಲಿದೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಅಂತಾ ಡೆನಿಸ್ ತಪ್ಪೊಪ್ಪಿಕೊಂಡಿದ್ದರು.

ಅಷ್ಟೇ ಅಲ್ಲ ಈ ಘಟನೆ ಬಗ್ಗೆ ಡೆನಿಸ್ ಟ್ವಿಟ್ಟರ್ ನಲ್ಲಿ ಬೇಷರತ್ ಕ್ಷಮೆ ಕೇಳಿದ್ದಾರೆ. ತಮ್ಮಿಂದಾದ ಒಂದು ತಪ್ಪಿನಿಂದ ತಂಡ ಸೋಲು ಅನುಭವಿಸಿದ್ದು, ತಮ್ಮನ್ನು ಕ್ಷಮಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಘಟನೆ ನಡೆದಾಗ ಡೆನಿಸ್, ಗ್ರೇಟ್ ಬ್ರಿಟನ್ ನ ಎಂಡ್ಮಂಡ್ ವಿರುದ್ಧ 6-3, 6-4, 2-1 ಸೆಟ್ ಗಳ ಹಿನ್ನಡೆ ಅನುಭವಿಸಿದ್ದರು. ಚೆಂಡು ತಗುಲಿದ್ದರಿಂದ ಅಂಪೈರ್ ಎಡಗಣ್ಣು ಊದಿಕೊಂಡಿತ್ತು, ಹೀಗಾಗಿ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...