alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ತೆಲಂಗಾಣದ ಸಿಂಧುಜಾ

cricketer

ತೆಲಂಗಾಣದ ಕ್ರಿಕೆಟ್ ಆಟಗಾರ್ತಿ ಸಿಂಧುಜಾ ರೆಡ್ಡಿಗೆ ಅಮೆರಿಕ ತಂಡದಲ್ಲಿ ಆಡುವ ಚಾನ್ಸ್ ಸಿಕ್ಕಿದೆ. ಇತ್ತೀಚೆಗಷ್ಟೆ ಅಮೆರಿಕ ತಂಡಕ್ಕೆ ಐಸಿಸಿಯಿಂದ ಮಾನ್ಯತೆ ಸಿಕ್ಕಿತ್ತು. ಅಮೆರಿಕದ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿ ಸಿಂಧುಜಾ ಆಡಲಿದ್ದಾರೆ.

ಈ ಹಿಂದೆ ಸಿಂಧುಜಾ ಹೈದ್ರಾಬಾದ್ ನ ಮಹಿಳಾ ರಣಜಿ ತಂಡದ ಪರವಾಗಿ ಆಡಿದ್ದರು. ಇತ್ತೀಚೆಗಷ್ಟೆ ಸಿಂಧುಜಾ ವಿವಾಹವಾಗಿದ್ದು, ಅವರ ಪತಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಸ್ಕಾಟ್ಲಾಂಡ್ ನಲ್ಲಿ ನಡೆಯಲಿರುವ ಟಿ-20 ಮಹಿಳಾ ವಿಶ್ವಕಪ್ ಕ್ವಾಲಿಫೈಯರ್ ನಲ್ಲಿ ಅಮೆರಿಕ ತಂಡದ ಪರ ಸಿಂಧುಜಾ ಕಣಕ್ಕಿಳಿಯಲಿದ್ದಾರೆ.

26 ವರ್ಷದ ಸಿಂಧುಜಾ ನಲ್ಗೊಂಡಾ ಜಿಲ್ಲೆಯ ಅಮಂಗಲ್ ಗ್ರಾಮದವರು. ಬಿಟೆಕ್ ಹಾಗೂ ಎಂಬಿಎ ಪದವಿ ಪಡೆದಿದ್ದಾರೆ. ಈ ಹಿಂದೆ ಹೈದ್ರಾಬಾದ್ ನ ಅಂಡರ್ 19 ತಂಡದ ನಾಯಕಿಯೂ ಆಗಿದ್ದರು. ಕ್ರಿಕೆಟ್ ಗೆ ಗುಡ್ ಬೈ ಹೇಳಲು ಸಜ್ಜಾಗಿದ್ದ ಸಿಂಧುಜಾಗೆ ಹೊಸ ಅವಕಾಶವೊಂದು ಒದಗಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...