alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಕಡಲಿನಲ್ಲಿ 48 ಕಿ.ಮೀ. ಈಜಿದ 14 ರ ಬಾಲೆ

ರಾಜಸ್ಥಾನದ ಉದಯ್ಪುರದ 14 ವರ್ಷದ ಬಾಲಕಿಯೊಬ್ಬಳು ಮುಂಬೈ ಕಡಲಿನಲ್ಲಿ 48 ಕಿ.ಮೀ. ಈಜುವ ಮೂಲಕ ದಾಖಲೆ ಬರೆದಿದ್ದಾಳೆ. ಗೌರಿ ಸಿಂಗ್ವಿ ಈ ವಿಶಿಷ್ಟ ಸಾಧನೆ ಮಾಡಿದ್ದು, 14 ರ ಬಾಲೆಯ ಸಾಧನೆಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.

ಪಶ್ಚಿಮದ ಖಾರ್ ದಂಡಾದಿಂದ ದಕ್ಷಿಣದ ಗೇಟ್ ವೇ ಆಫ್ ಇಂಡಿಯಾದವರೆಗೆ ಗೌರಿ ಸಿಂಗ್ವಿ ಈಜಿದ್ದು, ಈ ಸಂದರ್ಭದಲ್ಲಿ ಆಕೆಯ ನೆರವಿಗೆ ಯಾಂತ್ರಿಕೃತ ಬೋಟ್ ಒಂದು ಹಿಂಬಾಲಿಸುತ್ತಿತ್ತಾದರೂ ಗೌರಿ ಸತತವಾಗಿ ಈಜುವ ಮೂಲಕ ಈ ಸಾಧನೆ ಮಾಡಿದ್ದಾರೆ.

2017 ರ ಮಾರ್ಚ್ ನಲ್ಲಿ ಗೌರಿ 36 ಕಿ.ಮೀ. ಈಜಿದ್ದು, ಈಗ ಆ ಸಾಧನೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲಾಗಿದೆ. ಇಂಗ್ಲೀಷ್ ಕಾಲುವೆಯನ್ನು ಈಜಬೇಕೆಂಬ ಕನಸು ಹೊಂದಿರುವ ಗೌರಿ ಸಿಂಗ್ವಿ ಅದರಲ್ಲೂ ಯಶಸ್ಸು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...