alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ಅಡ್ಡೆಗೆ ಹೋಗಿದ್ದ ಆಟಗಾರರದ್ದು ಬೇಡ ಫಜೀತಿ

usa-mens-basketball-

ರಿಯೋ ಡಿ ಜನೈರೋ: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ನಲ್ಲಿ ವಿಶ್ವದ ಸುಮಾರು 207 ದೇಶಗಳಿಂದ ಅಪಾರ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅವರಲ್ಲಿ ಅಮೆರಿಕ ಬಾಸ್ಕೆಟ್ ಬಾಲ್ ತಂಡದ ಆಟಗಾರರು ವೇಶ್ಯಾವಾಟಿಕೆ ಕೇಂದ್ರದಲ್ಲಿ ಮುಜುಗರ ಅನುಭವಿಸಿದ್ದಾರೆ.

ಅಮೆರಿಕ ಬಾಸ್ಕೆಟ್ ಬಾಲ್ ತಂಡದ ಆಟಗಾರರಾದ ಡಿ ಆಂಡ್ರೆ ಜೊರ್ಡಾನ್, ಡೆ ಮಾರ್ಕ್ ಭೂಗಿ ಕೌಸಿನ್ಸ್ ಮತ್ತು ಡಿ ಮಾರ್ ಡೆರೋಜಾನ್ ಅವರು, ರಿಯೋ ಡಿ ಜನೈರೋದಲ್ಲಿ ಸುತ್ತಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ವೇಶ್ಯಾವಾಟಿಕೆ ಅಡ್ಡೆಗೆ ಹೋಗಿದ್ದಾರೆ. ಮದ್ಯ ಸೇವಿಸಲು ಬಾರ್ ಹುಡುಕಿಕೊಂಡು ಹೋಗಿದ್ದ ಅವರಿಗೆ ಸಣ್ಣ ಬಾರ್ ಒಂದು ಕಾಣಿಸಿದೆ. ಅಲ್ಲೇ ಮದ್ಯ ಸೇವಿಸಬಹುದೆಂದು ಒಳಗೆ ಹೋದ ಮೂವರೂ ಪೇಚಿಗೆ ಸಿಲುಕಿದ್ದಾರೆ. ಅದು ಬಾರ್ ಬದಲಿಗೆ ವೇಶ್ಯಾಗೃಹವಾಗಿತ್ತೆನ್ನಲಾಗಿದೆ.

ಟವರ್ಸ್ ಮಾಂಟೆ ಕಾರ್ಲೆ ಎನ್ನುವ ಈ ಸ್ಥಳ ವೇಶ್ಯಾಗೃಹವಾಗಿದ್ದು, ಅಲ್ಲಿ ಯುವತಿಯರು, ಮಹಿಳೆಯರೇ ಹೆಚ್ಚಾಗಿದ್ದರು. ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿದ ಅಮೆರಿಕ ಬಾಸ್ಕೆಟ್ ಬಾಲ್ ತಂಡದ ಆಟಗಾರರು, ಇದು ತಮಗೆ ತಕ್ಕನಾದ ಸ್ಥಳವಲ್ಲ ಎಂದು ವೇಶ್ಯಾಗೃಹದಿಂದ ಹೊರಗೆ ಬಂದಿದ್ದಾರೆ. ರಿಯೋದಲ್ಲಿ ಸ್ಪಾ ಪಾರ್ಲರ್ ಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...