alex Certify
ಕನ್ನಡ ದುನಿಯಾ       Mobile App
       

Kannada Duniya

2 ನಿಮಿಷದಲ್ಲಿ ಸ್ನಾನ ಮುಗಿಸಬೇಕು ಟೀಂ ಇಂಡಿಯಾ ಆಟಗಾರರು…!

ದಕ್ಷಿಣ ಆಫ್ರಿಕಾ ವಿರುದ್ಧ 25 ವರ್ಷಗಳಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ಟೀಂ ಇಂಡಿಯಾ ಈ ಕಹಿ ನೆನಪನ್ನು ಅಳಿಸಿ ಹಾಕಲು ದಕ್ಷಿಣಾ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಆದ್ರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ವಿಚಿತ್ರ ಸಮಸ್ಯೆ ಎದುರಾಗಿದೆ.

ಟೀಂ ಇಂಡಿಯಾ ಆಟಗಾರರು ಎರಡು ನಿಮಿಷಕ್ಕಿಂತ ಹೆಚ್ಚು ಕಾಲ ಬಾತ್ ರೂಂನಲ್ಲಿರುವಂತಿಲ್ಲ. ಅಂದ್ರೆ ಆಟಗಾರರಿಗೆ ಸ್ನಾನ ಮಾಡಲು ಕೇವಲ 2 ನಿಮಿಷ ಮಾತ್ರ ಸಿಗಲಿದೆ. ದಕ್ಷಿಣ ಆಫ್ರಿಕಾದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಅದ್ರಲ್ಲೂ ಕೇಪ್ ಟೌನ್ ಜನರು ನೀರಿಗೆ ಪರದಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಜನರಿಗೆ ಎರಡು ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡದಂತೆ ಸೂಚನೆ ನೀಡಿದೆ.

ಕೇಪ್ ಟೌನ್ ಜನರಿಗೆ ಅನ್ವಯವಾಗುವ ನಿಯಮ ಟೀಂ ಇಂಡಿಯಾ ಆಟಗಾರರಿಗೂ ಅನ್ವಯಿಸಿದೆ. ಜನವರಿ ಐದರಿಂದ ಶುರುವಾಗುವ ಟೆಸ್ಟ್ ಪಂದ್ಯಕ್ಕಾಗಿ ಆಟಗಾರರು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ತರಬೇತಿ ಮುಗಿಸಿ ಹೊಟೇಲ್ ಗೆ ಬಂದ್ರೆ ಸರಿಯಾಗಿ ಸ್ನಾನ ಮಾಡುವಂತಿಲ್ಲ. ನಿಯಮದಂತೆ 2 ನಿಮಿಷ ಸ್ನಾನ ಮಾಡಿ ಹೊರ ಬರಬೇಕಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...