alex Certify
ಕನ್ನಡ ದುನಿಯಾ       Mobile App
       

Kannada Duniya

205 ರನ್ ಗೆ ಶ್ರೀಲಂಕಾ ಆಲೌಟ್ : 4 ವಿಕೆಟ್ ಕಬಳಿಸಿದ ಅಶ್ವಿನ್

ನಾಗ್ಪುರದಲ್ಲಿ ಟೀಂ ಇಂಡಿಯಾ-ಶ್ರೀಲಂಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಯ್ತು. ಶ್ರೀಲಂಕಾ ಪಡೆ 205 ರನ್ ಗೆ ತನ್ನೆಲ್ಲ ಟಿಕೆಟ್ ಒಪ್ಪಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾದ ಆರಂಭ ಉತ್ತಮವಾಗಿರಲಿಲ್ಲ. 27 ಓವರ್ ಗೆ 1.40 ಸರಾಸರಿಯಲ್ಲಿ ಎರಡು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಶ್ರೀಲಂಕಾಕ್ಕೆ ದಿಮತ್ ಕರುನಾರತ್ನೆ ಹಾಗೂ ದಿನೇಶ್ ಚಂಡಿಮಾಲ್ ಆಸರೆಯಾದ್ರು. ಕರುನಾರತ್ನೆ 51 ರನ್ ಸಿಡಿಸಿದ್ರೆ ಚಂಡಿಮಾಲ್ 57 ರನ್ ಗಳಿಸಿದ್ರು.

ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಶ್ರೀಲಂಕಾ ಬ್ಯಾಟ್ಸ್ಮೆನ್ ಗಳು ಪೆವಿಲಿಯನ್ ಪರೆಡ್ ಮಾಡಬೇಕಾಯ್ತು. ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್ ಕಬಳಿಸಿದ್ರು. ಬೌಲಿಂಗ್ ಮಾಡಿದ ಜಡೇಜಾ ಹಾಗೂ ಇಶಾಂತ್ ಶರ್ಮಾ ಮೂರು ಮೂರು ವಿಕೆಟ್ ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದ್ರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...