alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಗೆಲುವಿಗೆ 217 ರನ್ ಗುರಿ

lana-niru

ದಾಂಬುಲಾ: ದಾಂಬುಲಾದ ರಣಗಿರಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 216 ರನ್ ಗಳಿಗೆ ಆಲ್ ಔಟ್ ಆಗಿದೆ.

ಭಾರತದ ಪರ ಮಾರಕ ದಾಳಿ ನಡೆಸಿದ ಅಕ್ಷರ್ ಪಟೇಲ್ 3, ಕೇದಾರ್ ಜಾಧವ್ 2, ಯಜುವೇಂದ್ರ ಚಾಹಲ್ 2, ಜಸ್ ಪ್ರೀತ್ ಬೂಮ್ರಾ 2 ವಿಕೆಟ್ ಪಡೆದರು.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಟಿಂಗ್ ಆಯ್ದುಕೊಂಡಿದ್ದರು. ಶ್ರೀಲಂಕಾ ಪರವಾಗಿ ನಿರೊಶನ್ ಡಿಕ್ವೆಲಾ 64, ಧನುಷ್ಕ ಗುಣತಿಲಕ 34 ಉತ್ತಮ ಆರಂಭ ಒದಗಿಸಿದರು.

ಕುಶಾಲ್ ಮೆಂಡಿಸ್ 36, ಉಪುಲ್ ತರಂಗಾ 13, ಏಂಜೆಲೊ ಮ್ಯಾಥ್ಯೂಸ್ ಅಜೇಯ 36, ಚಾಮರಾ ಕಪುಗೆದೆರಾ 1, ವೆನಿಂದು ಹಸರಂಗಾ 2, ತಿಸಾರಾ ಪೆರೆರಾ 0, ಲಕ್ಷ್ಮಣ್ ಸಂದಕನ್ 5, ಲಸಿತ್ ಮಾಲಿಂಗಾ 8, ವಿಶ್ವ ಫೆರ್ನಾಂಡೊ 0 ರನ್ ಗಳಿಸಿದ್ದಾರೆ.

43.2 ಓವರ್ ಗಳಲ್ಲಿ 216 ರನ್ ಗಳಿಗೆ ಲಂಕಾ ಎಲ್ಲಾ ವಿಕೆಟ್ ಕಳೆದುಕೊಂಡಿದ್ದು, ಭಾರತದ ಗೆಲುವಿಗೆ 217 ರನ್ ಗುರಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...